Posts

Showing posts from February, 2009

ಚೂರು ಚೂರು

ಚೂರು ಚೂರು ಒಂಚೂರು ಪ್ರೀತಿ ಸಾಕು ಗೆಳತಿ ಈ ಬದುಕಿಗೆ ಇನ್ನೇನು ಬೇಕು..... ಪ ತುಡಿತ ಮಿಡಿತ ಬಡಿತ ಶುರುವಾಗದಿದ್ದರೇನು ನೆನಪು ನೆನಪಾಗಿ ಬರುವದು ಹಸಿರು ಹೆಸರು ಉಸಿರು ಆಡದಿದ್ದರೇನು ಕನಸು ಕನಸಾಗಿ ಕಾಡುವದು ನೀನಿದ್ದರು ಇರದಿದ್ದರೂ ಮೌನ ಮೌನವೇ ನೀಹೋದರು ನೀಬಂದರು ಧ್ಯಾನ ಧ್ಯಾನವೇ......... ಪ ಸುಂದರ ಅದರ ಮಧುರ ಜೇನಾಗದಿದ್ದರೇನು ಸಿಹಿಯ ಸೂಸಿ ಸುರಿಯುವದು ಚಲುವ ನಿಲುವ ಒಲವ ಸೋಲದಿದ್ದರೇನು ಹೃದಯ ಬೀಸಿ ಕರೆಯುವದು ಪ್ರೀತಿಸಿದರು ಇಲ್ಲದಿದ್ದರೂ ಪ್ರೀತಿ ಪ್ರೀತಿಯೇ ಸಮತ್ತಿಸಿದರು ಇರದಿದ್ದರೂ ಸಮ್ಮತ ಸಮ್ಮತವೇ .... ಪ