Posts

Showing posts from November, 2008

ಅರಗಿಣಿ..

ಹೃದಯಾನೆ ಇರದಿದ್ದರೆ ಪ್ರೀತಿಯಲ್ಲಿರತ್ತಿತ್ತೋ ಪ್ರೀತಿ ಮಾಡೋರು ಯಲ್ಲಿರತಿದ್ರೋ ಪ್ರೀತಿನೇ ಇರದಿದ್ದರೆ ಪ್ರಪಂಚವೆಲ್ಲಿರತ್ತಿತ್ತೋ ಪ್ರಪಂಚ ಕಾಯೋರು ಯಾರಿರತಿದ್ರೋ ಯಾರಿಗೊತ್ತೋ ಯಾರಿಗೊತ್ತೋ ಬೇಡ ಬಿಡು ಹುಡುಗಿ ಇಲ್ಲದ ಸಲ್ಲದ ಪ್ರಶ್ನೆ ನಮಗೆಕಲ್ಲವೇ........ ಪ ಶಾಲೆಗೆ ಹೊತ್ತೊಯ್ಯೂ ಪುಸ್ತಕ ಚೀಲವಾಗಿ ನನ್ನ ಹೆಗಲವೇರಿ ಕುಳಿತಿಕೋ ಪುಸ್ತಕದ ಮಡಿಲಲಿ ರೋಚಕ ನವಿಲಾಗಿ ನಿನ್ನಷ್ಟಕ್ಕೆ ನೀ ಕುಣಿದಿಕೋ ಕೇಳೋರು ಯಾರು ಹೇಳೋರು ಯಾರು ಕುಳಿತರು ಕುಣಿದರು ನನ್ನ ಅರಗಿಣಿ ಹೃದಯಗಿಣಿ ಜೇನಿನಹನಿ ವಜ್ರದ ಮಣಿ ...... ಹೃದಯಾನೆ

ಗೆಳತಿ ನಿನಗೊಂದನೆ..

ಮೊದಲ ಗೆಳತಿಯಾಗಿ ಮನದಲಿ ಮೊಹಬ್ಬತ್ ತಂದೆ ಜೀವಕೆ ಜೊತೆಯಾಗಿ ಕಣ್ಣಲಿ ಖುಬಸುರತ್ ತಂದೆ ಗುರಿಗೆ ಸ್ಪೂರ್ತಿಯಾಗಿ ಹೃದಯದಲಿ ಹಖಿಖತ್ ತಂದೆ ಓ ಡಿಯರ ಲವ್ ಯು ಮಿಸ್ ಯು ....... ಪ ಅಮವಾಷ್ಯ ಕತ್ತಲ ಕವಿದು ಜೀವವ ಗೀಚಿದೆ ಹುಣ್ಣಿಮೆ ಬೆಳಕ ಹರಿದು ಪ್ರೇಮವ ದೋಚಿದೆ ಗೀಚಿ ದೋಚಿದ ಗೆಳತಿ ನಿನಗೊಂದನೆ ಏಳೇಳು ಜನ್ಮದ ಕೋಟಿ ಅಭಿನಂದನೆ............ ಮೊದಲ ಮುಗಿಲಿನಂತೆ ವಿಶಾಲತೆ ತಳೆದು ಇಡಿ ಜಗವ ಸುತ್ತಿದೆ ಧರೆಯಂತೆ ದಿಲ್ಲನ್ನಾ ತೆರೆದು ಇಡಿ ದೇಹವ ಮುತ್ತಿದೆ ಸುತ್ತಿ ಮುತ್ತಿದ ಗೆಳತಿ ನಿನಗೊಂದನೆ ನೂರಾರು ಯುಗದ ಕೋಟಿ ಅಭಿನಂದನೆ........... ಮೊದಲ

ಇವಳು ಯಾವಳೋ..

ಇವಳು ಯಾವಳೋ ಇವಳು ಯಾವಳೋ ಕನಸಲ್ಲಿ ಬಂದು ಮನಸ ಕೆಡಿಸೋಳು ಕಣ್ಣಲ್ಲಿ ನಿಂತು ದ್ರಷ್ಟ್ಹಿಯ ಮಂಜಾಗಿಸೋಳು ........ಪ ಅದ್ಯಾವ ಕವಿಕಲ್ಪನೆಯ ಕಾವ್ಯಯಿವಳೋ ಹೃದಯದಿ ಪ್ರೆಮಕಹಳೆ ಉದಿಹಳೋ ಮೊಗದಲಿ ಅಮ್ರುತಕಳೆ ನೀಡಿಹಳೋ ಮನಸ್ಸಿಗೆ ಮನಸನ್ನೇ ಬರೆದಿಹಳೋ ಇವಳು ಯಾವಳೋ ಇವಳು ಯಾವಳೋ.........ಇವಳು ಏಳೇಳು ಜನ್ಮದ ನಂಟಿನವಳೋ ಹೃದಯದ ನೆತ್ತರ ಕುಡಿಯುತಿಹಳೋ ಬೆಳದಿಂಗಳ ಬಾಲೆಯ ವಂಶದವಳೋ ಅಮವಾಶ್ಯಾಯ ಕತ್ತಲಲು ಹೊಳೆಯುತಿಹಳೋ ಇವಳು ಯಾವಳೋ ಇವಳು ಯಾವಳೋ.........ಇವಳು ಮೋಹದ ಸ್ತಳದಿ ಮನೆ ಮಾಡಿಹಳೋ ನರನಾಡಿಯ ಮಿಡಿತಕೆ ಜೀವ ತುಂಬಿಹಳೋ ಉಸಿರೊಳಗೆ ಉಸಿರಾಗಿ ಬಂದಿಹಳೋ ಎದೆಯೋಳಗವಿತು ನನ್ನನ್ನೇ ಮರೆಸಿಹಳೋ ಇವಳು ಯಾವಳೋ ಇವಳು ಯಾವಳೋ.........ಇವಳು
ತೂರಿಬಿಡು ಗಾಳಿಯಲಿ ಉಸಿರಿನ ಉಸಿರನು ಮಾರಿಬಿಡು ಸಂತೆಯಲಿ ಮನಸಿನ ಮನಸನು ನೀನು ಸಿಗದ ಮೇಲೆ ನಿನ ಪ್ರೀತಿಯು ಕೊಡದ ಮೇಲೆ ನಂದೇನಿದೆ ಈ ಭೂಮಿಯ ಮೇಲೆ ಅಂತಹ ಸಾಧನೆ ಹೇಳಲೇ

ಗಾಳಿಯ ಗೂಡು..

ಗಾಳಿಯ ಗೂಡು ಗಾಳಿಯಲ್ಲಿರದೆ ಹೃದಯದೊಳಗೆಕೋ ಅವಿತಿದೆ ಹೃದಯ ಹಾಡು ಹೃದಯದೊಳಗಿರದೆ ಹೊರಗಡೆಕೋ ಬರುತಿದೆ ಏನಿದು ಮಾಯೆ ಕಾಣದು ಛಾಯೆ .............. ಪ ಜೇಡರ ಹುಳುವು ಬಲೆ ಹೆಣೆದು ಹೊರಬರದೆ ಅದರಲೇ ಸತ್ತರು ಪಾಪ ಅನ್ನೋರು ಯಾರು ಎರೆ ಹುಳುವು ನೆಲ ಅಗೆದು ನೆಲದಲೇ ನೆಲ ಸಮವಾದರು ಕುಳಿತು ಅಳೋರು ಯಾರು ಈ ಜಗದಲಿ ಯಾರಿಗ್ಯಾರು ಅಂತದರಲು ನಾ ನಿನಗಾಗುತಿದ್ದರು ನೀ ದೂರ ತಳ್ಳದಿರು ರಗಳೆ ಮಾಡದಿರು.............. ಗಾಳಿಯ ಗೂಡು ಪ್ರೀತಿಸೊ ಪ್ರೇಮಿಗಳ ಸಾಲಲಿ ಇವನೊಬ್ಬ ದಂಡ ಎನ್ನದೆ ಹೊಕ್ಕಿನೋಡೆ ನೀನೊಮ್ಮೆ ನನ್ನೆದೆ ಕಾಡಿಸೋ ಹುಡುಗರ ಗುಂಪಲಿ ಇವನೊಬ್ಬ ಪುಂಡ ಎನ್ನದೆ ಕೊಟ್ಟುಬಿಡೆ ನಿನ್ನ ಚಿನ್ನೆದೆ ಈ ಪ್ರೆಮಕು ಕಣ್ಣಿದೆ ನಮ್ಮಿಬ್ಬರನು ನೋಡಲು ಕಾಯುತಿದೆ ಕಣ್ಣು ತೆರೆಯೋದರೊಳಗೆ ಸೇರುಬಾ ನನ್ನೆದೆ .............. ಗಾಳಿಯ ಗೂಡು

ನೀನೇಕೆ ಕೊಲ್ಲುವೆ ಚೆಲುವೆ ?..

ಕನಸಲು ಮನಸಲೂ ಕೊಲ್ಲುವೆ ಮಾತಿನಲು ನೋಟದಲು ಕೊಲ್ಲುವೆ ನಗೆಯಲು ಅಳುವಲು ಕೊಲ್ಲುವೆ ಕುಂತರು ನಿಂತರು ಕೊಲ್ಲುವೆ ಇಲ್ಲಿಯೂ ಅಲ್ಲಿಯೂ ಎಲ್ಲೆಲ್ಲಿಯೂ ಬಿಡದೆ ಬೆನ್ನಟ್ಟಿ ಕೊಲ್ಲುವೆ ಯಾತಕೆ ಓ ಚೆಲುವೆ ನೀನೇಕೆ ಕೊಲ್ಲುವೆ ?.. ಪ್ರೇಮದ ಅಸ್ತ್ರದಿಂದ ನೀನೇಕೆ ಕೊಲ್ಲುವೆ ಚೆಲುವೆ ?........ ಪ ಹೊತ್ತು ಉರುಳಿದರು ಹೊತ್ತು ಹೊರಳಿದರು ನಿನ ಧ್ಯಾನದಲೇ ಕುಳಿತಿರುವೆ ನೋವು ಕೆದರಿದರು ನೋವು ಚದುರಿದರು ನಿನ ನೆನಪಲೆ ಕಾದಿರುವೆ ಆದರು ನಿನಗೆ ಕರುಣೆ ಬಾರದೆ ಪ್ರೀತಿಯ ತಿಳಿಯಬಾರದೆ ತಿಳಿದರು ತಿಳಿದಿರದ ಹಾಗೆ ನಿಂತು ದುರಿಂದಲೇ ನನ್ನೇಕೆ ಕೊಲ್ಲುವೆ ಚೆಲುವೆ....? .......... ಕನಸಲು ದೂರ ಹೋದರು ಸನಿಹ ಬಂದರು ನಿನ ಕಣ್ಣೋಟದಲೇ ತಿರಸ್ಕರಿಸುವೆ ಜೀವನ ಸಾಕಾದರೂ ಸಾವು ಬೇಕಾದರೂ ನಿನ ಮನಬಂದಂತೆ ಆಡಿಸುವೆ ಆದರು ನಾ ನಿನ್ನ ಆರಾಧಿಸುತಿಲ್ಲವೇ ನೀನೆe ನನ್ ಪಾಲಿಗಲ್ಲವೇ ಸಾಲಾದರೂ ಸೋಲಾದರು ನಿನ ಸಾಕುವೆ ಓ ಚೆಲುವೆ ನೀ ಕೊಲ್ಲಬೇಡ ವೇ .................... ಕನಸಲು

ಮುಗಿಲು..

ಹ್ರುದಯಾಳದಿ ನಿಂತು ಮುಗಿಲು ನೋಡಿದರೆ ಕೆಂಪು ಕೆಂಪು ಕಂಗಳಾಳದಿ ಕುಳಿತು ಮುಗಿಲು ನೋಡಿದರೆ ಕಪ್ಪು ಬಿಳುಪು ಏನಿದು ಒಂದೇ ದೇಹದಿ ವಿಧ ವಿಧ ಭಾವನೆ.................... ಪ ರಸ್ತೆಯಲಿ ನಡೆಯೋ ಅಪಘಾತಗಳಿಗಂಜಿ ಎದೆಯ ಪಕ್ಕೆಲಬುಗಳಲಿ ಬಚ್ಚಿ ಕುಳಿತಿದೆ ಹೃದಯ ಕುಳಿತಲ್ಲೇ ಕುಡಿದು ಪ್ರೀತಿಯ ಗಂಜಿ ಸುಳಿದಾಡಿ ಪರಿಧಿಯಲಿ ನೆಗ್ಗಿ ಹೋಗಿದೆ ಬಿದ್ದು ಪ್ರೀತಿಯ ಪಡಸಾಲೆಯಲಿ.............. ಹ್ರುದಯಾಳದಿ ಅಂದ ಚಂದವನು ಸವಿಯೋವಾಶೆಗಾಗಿ ಮುಖದ ಮೇಲೆ ಮಿನ ಮಿನಗುತಿದೆ ಕಣ್ಣು ಮಿನಗುತಲೆ ಪ್ರೇಮದ ಭಂದನದಲಿ ಸಿಲುಕಿ ತನ್ನ ತಾ ಬಿಡಿಸಿಕೊಳ್ಳಲಾಗಿದೆ ಕಣ್ಣೀರ ದಾಸನಾಗಿ ಕಣ್ಣು ಕಣ್ಣಲೆ ಕುಗ್ಗಿ ಹೋಗಿದೆ ................. ಹ್ರುದಯಾಳದಿ

ಭಯ ಭಯ...

ಭಯ ಭಯವೇಕೋ ನನ್ನೊಳಗೆ ಭಯ ಭಯವೇಕೋ ಕಣ್ಣೊಳಗೆ ನೀನೆದುರು ಬಂದರೆ ನೀನೆದರು ಹಾಯಿಸಿದರೆ.......... ಪ ಕೋಟಿ ಮಾತುಗಳಿಗೆ ಕೀಲಿಯ ಹಾಕಿ ಬಾಯಿಯ ಸಂದಕ ಮುಚ್ಚಿರುವೆ ನೂರು ಕವನಗಳಿಗೆ ಮಸಿಯ ಚೆಲ್ಲಿ ಕೈ ಬರವಣಿಗೆ ಬಿಡಿಸಿರುವೆ ಅದರೂ ನೀನೆದುರಾದಾಗ ಬಾಯಿ ತೆರೆಯದೆ ಮಾತು ಹೊರಡದೆ ಕವನವೇಕೆ ಹೊರಬರುವದೋ ಭಯ ಭಯವೋ ಭಾವನೆಗೂ ಭಯ ಭಯವೋ ಪ್ರೀತಿಗೂ..................... ಭಯ ಪ್ರೇಮದ ಉತ್ತುಂಗ ಏರಿ ನಿಂತು ಜಿಗಿಯೋ ಆಶೆಯನು ಇಟ್ಟಿರುವೆ ಗಗನದ ಬಾಗಿಲಿಗೆ ತೋರಣ ಬಿಗಿದು ಒಳ ಹೋಗದೆ ಹಾಗೆ ಬಂದಿರುವೆ ಬರೋವಾಗ ನೀನೆದುರಾದಾಗ ಬಾಗಿಲು ತೆರೆಯದೆ ಉತ್ತುಂಗದಿ ಜಿಗಿಯದೆ ಸಿಹಿ ಸಾವು ಹೇಗೆ ಬರುವದೋ ಭಯ ಭಯ ಸಾವಿಗೂ ಭಯ ಭಯ ನೋವಿಗೂ........................... ಭಯ

ಖಾಲಿ ಹಾಳೆಯಲಿ...

ಖಾಲಿ ಹಾಳೆಯಲಿ ಬರೆದ ಅಕ್ಷರಗಳೆಲ್ಲ ಖಾಲಿ ಖಾಲಿಯಲ್ಲ ಅದು ಜಾಲಿ ಜಾಲಿ ಪ್ರೇಮ ಪತ್ರವಾಗಿದ್ದರೆ ಮನಸೊಳಗೆಲ್ಲ ಹೋಳಿ ಹೋಳಿ ..... ಪ ಹೃದಯದ ಮುಲೆಮುಲೆಯಲು ಹುದುಗಿದ ಪ್ರೀತಿಯ ಹುಡುಕಿ ನೆನಪಿನ ಮೆರವಣಿಗೆಯಲು ಮರುಗಿದ ನೋವನು ಕೆದಕಿ ನಿನ್ನರಮನೆಯ ಬಾಗಿಲಿಗೆ ಕರೆಯೋಲಿಯಲಿ ನಾನಾಗಿ ಸಾವಿರದ ಸಾವೇ ಇರದ ವಿಷಯವನು ಹೊತ್ತು ತರಲೆ............ ಖಾಲಿ ಮುಂಜಾನೆಯ ಮಂಜುಮಂಜಲು ಇಬ್ಬನಿಯ ತುಣುಕು ಹಿಡಿದು ಮುಸ್ಸಂಜೆಯ ಮ್ರುದುವಿನಲು ಅರಳಿದ ಹೂವನು ಹರಿದು ನಿನ್ನೊಲವಿನ ಪೂಜೆಗೆ ಪುಜಾರಿಯೇ ನಾನಾಗಿ ಕೊನೆಯಿರದ ಕೊನೆಯಾಗದ ಭಾವಭಾಕ್ತಿಯನು ನಿನಗೆ ತರಲೆ

ನನ್ನವಳಾಗಿರು

ನೀ ಕಪ್ಪಗಿರು ಬೆಳ್ಳಗೆ ಇರು ಸದಾ ನಗುತಿರು ನೀ ಕುಳ್ಳಗಿರು ಎತ್ತರವಿರು ಸದಾ ಪ್ರೀತಿಸುತಿರು ಏನೆ ಆಗಲೀ ಏನೆ ಹೋಗಲಿ ಎಂದೆಂದು ನನ್ನವಳಾಗಿರು ನೀನಿಂದು ಮುಂದು ಎಂದೆಂದು ನನ್ನವಳಾಗಿರು..... ನಿಂಕಂಗಳಲಿ ಕನಸಿನ ರಾಶಿಯಾಗಿ ಸುರಿದು ಬಿಡಲೇ ನಿಂದೇಹದಲಿ ಪ್ರೇಮದ ಮಚ್ಚೆಯಾಗಿ ಉಳಿದು ಬಿಡಲೇ ನನಹುಡುಗಿ ನಿನ್ನಲಿ ಉಸಿರಾಗಿ ಉಸಿರು ಬಿಡಲೇ ನನಹುಡುಗಿ ಉಸಿರು ಬಿಡಲೇ.........ನೀ ನಿಂತುಟಿ ಗಳಲಿ ಜೇನ ಹನಿಯಾಗಿ ಕುಳಿತು ಬಿಡಲೇ ನಿನ್ನಗೆಯಲಿ ಅಮೃತ ಧಾರೆಯಾಗಿ ಹರಿದು ಬಿಡಲೇ ನನಬೆಡಗಿ ನಿನ್ನಲಿ ನವಿಲಾಗಿ ಕುಣಿದು ಬಿಡಲೇ ನನಬೆಡಗಿ ಕುಣಿದು ಬಿಡಲೇ............. ನೀ

ಜನುಮದ ಗೆಳತಿ..

ನೆನಪಾದೆ ನೆನಪಾದೆ ನೆನಪಿಗೆ ನೀ ನೆಪವಾದೆ ಕನಸಾದೆ ಕನಸಾದೆ ಕನಸಿಗೆ ನೀ ಜಪವಾದೆ ಇನ್ನೆಲ್ಲಿ ನೆನಪಿದೆ ಇನ್ನೆಲಿ ಕನಸಿದೆ ಮನಸೇ ಮುರಿದ ಮೇಲೆ ಪ್ರೀತಿ ತೀರಿದ ಮೇಲೆ.............. ಪ ಉಸಿರು ಹಾಕುವ ಮೆಲುಕು ಶಬ್ದ ಉಸಿರಾಟಕೆ ಬೇಸರವಾದಿತೆ ಹೃದಯ ಬಡಿಯೋ ಕ್ಷಣಕ್ಷಣದ ಶಬ್ದ ಹೃದಯಕೆ ಭಾರವಾದಿತೆ ಇಂದಾದರೂ ಮುಂದಾದರು ಹೇಳು ಓ ಕವಿತೆ ಜೀವದಾ ಗೀತೆ......... ನೆನಪಾದೆ ನಡೆಯೋ ದಾರಿಯ ತುಳಿದರೇನು ದಾರಿ ಸವೆದುಹೋದಿತೆ ಕುಡಿಯೋ ನೀರನು ಚೆಲ್ಲಿದರೇನು ನೀರು ಬೆಸರುಗೊಂಡಿ ತೆ ನೋವಾದರೂ ಸಾವೇ ಬಂದರು ಹೇಳು ಓ ಗೆಳತಿ ಜನುಮದ ಗೆಳತಿ...... ನೆನಪಾದೆ

ಬೆಳದಿಂಗಳಂತ ಹುಡುಗಿ..

ಬೆಳದಿಂಗಳಂತ ಹುಡುಗಿ ಸಿಡಿಲಂತೆ ಗುಡುಗಿ ಮಿಂಚು ಬಾ ನನ್ನೆದೆಯಲಿ ಮಳೆಬರೋ ಹಾಗಿದೆ ಕಾಮನಬಿಲ್ಲು ಮೂಡೋಹಾಗಿದೆ....... ಪ ಹಗಲು ರಾತ್ರಿಗಳಿರದ ಪ್ರೇಮಕೆ ಪಿಶಾಚಿಗಳ ಕಾಟವಿರದು ಮಾಯ ಮಂತ್ರಗಳಿರದ ಪಥಕೆ ನಿಶಾನೆಯ ಭಯವಿರದು ಪ್ರೀತಿಸು ಬಾ ಮುದ್ದಿಸು ಬಾ ನಿನ್ನ ಭಾಷೆಯಲಿ ನನ್ನಾಶೆಯಲಿ........... ಬೆಳದಿಂಗಳಂತ ನೀನಿರಲು ನನ್ನಲಿ ನಾ ಬರಲು ನಿನ್ನಲಿ ಕಾನೂನು ಬೇಕಿಲ್ಲ ಪ್ರೀತಿ ಪಯಣದ ಪ್ರತಿ ಬೆಸುಗೆಯಲಿ ಜಾತಿಮತ ಬೇಕಿಲ್ಲ ಒಪ್ಪಿಕೊ ಬಾ ಅಪ್ಪಿಕೋ ಬಾ ನನ್ನ ಬಾಳಿನಲಿ ನಿನ್ ತೋಳಿನಲಿ............ ಬೆಳದಿಂಗಳಂತ

ಒಂದ್ಸಾರಿ ಸಾಯೋವಾಸೆ

ನೋಡು ನೋಡು ನೋಡು ನನ್ನ ಕಣ್ಣಲೆ ಕಣ್ಣನಿಟ್ಟು ಕಾಡು ಕಾಡು ಕಾಡು ನನ್ನ ಹೃದಯ ಕದ್ದುಬಿಟ್ಟು ಈ ಹೃದಯ ಕಳುವಾಗೋ ಮುನ್ನ ಒಂದ್ಸಾರಿ ಸಾಯೋವಾಸೆ ಈ ಕಣ್ಣು ಮಲಗೋ ಮುನ್ನ ಒಂದ್ಸಾರಿ ಸಾಯೋವಾಸೆ........ ಪ

ಮುನ್ನ..

ನಿನ ನೆನಪಿನ ಒದ್ದಾಟ ಒಂಟಿ ರಗಳೆ ಮಾಡಿದೆ ನಿನ ಮೆಲಕು ನೋಟ ಜಂಟಿ ಕಾರ್ಯಕ್ರಮ ಹೂಡಿದೆ ಯಾತಕೆ ಹುಡುಗಿ ಇದ್ಯಾತಕೆ ಸುರ್ಯೋದಯಕು ಮುನ್ನ ಚಂದ್ರೋದಯಕು ಮುನ್ನ......... ಕಂಗಳು ಕಾಣುವ ಕನಸಲು ನಿನ ಗುರುತು ಸಿಗದು ಹೃದಯ ಬರೆವ ಒಲೆಯಲು ನಿನ ನಾಮ ಮೂಡದು ಜೀವನ ಸುಳಿವ ಸ್ಪರ್ಶದಲು ನಿನ ಊರು ಸಿಗದು ಏನು ಮಾಡಲಿ ನಿನ್ಹೆಗೆ ಪಡೆಯಲಿ ............. ನಿನ ಹೂ ಸುಸೋ ಪರಿಮಳದಲು ನಿನ ಸುಗಂಧ ಸಿಗದು ಕವಿ ಬರೆಯೋ ಕ ವಿತೆಯಲು ನಿನ ವರ್ಣನೆ ಸಾಲದು ಉಸಿರು ಹಾಕುವ ಮುದಿತನದಲು ನಿನ ನೆನಪು ಸಾಯದು ಏನು ಹೇಳಲಿ ನಿನ್ಹೆಗೆ ಗೆಲ್ಲಲಿ............... ನಿನ

ಬಿಡು ಬಿಡು ಬಿಟ್ಟು ಬಿಡು..

ಬಿಡು ಬಿಡು ಬಿಟ್ಟು ಬಿಡು ಕೊಡು ಕೊಡು ಕೊಟ್ಟು ಬಿಡು ನನ ಹೃದಯ ನನಗೆ ನನ ಒಲವು ನನಗೆ ನೊಂದಿರುವೆ ಬೆಂದಿರುವೆ ನಿನ ಪ್ರೇಮದಮಲಿನಲಿ ಬದುಕುವೆ ಬಾಳುವೆ ನನದೆ ನವ ಪ್ರೀತಿಯಲಿ ..............ಬಿಡು ನಗೆಯು ಹದ ಮಾಡೋ ಭೂಮಿಯಲ್ಲ ತುಳಿದು ತುಳಿದು ಹೋಗಲು ಒಲವು ಮುದ ನೀಡೋ ಸುರಪಾನವಲ್ಲ ಕುಡಿಸಿ ಕುಡಿಸಿ ಕೊಲ್ಲಲು ಅದರೂ ನಗೆಯಲೆ ಒಲವರಳಿಸಿ ಒಲವಲೆ ಬಿಸಿ ಮೂಡಿಸಿ ದೂರ ದೂರಾಗುತಿರಲು ಬಿಡು ಬಿಡು ಬಿಟ್ಟು ಬಿಡು ಕೊಡು ಕೊಡು ಕೊಟ್ಟು ಬಿಡು................ಬಿಡು ಮನಸು ಕರಗೋ ಮಂಜುಗಡ್ಡೆ ಯಲ್ಲ ವಿರಹ ಶಾಖ ಕೊಡಲು ನೆನಪು ಸೊರಗೋ ದೇಹವಲ್ಲ ಅನ್ನ ನೀರು ಬಿಡಲು ಕಣ್ಣು ಕಣ್ಣಲೆ ಮಾತಾಡಿಸಿ ಕಣ್ಣಲೆ ಕಸ ತುಂಬಿಸಿ ಖುಸಿ ಖುಸಿ ಪಡುತಿರಲು ಬಿಡು ಬಿಡು ಬಿಟ್ಟು ಬಿಡು ಕೊಡು ಕೊಡು ಕೊಟ್ಟು ಬಿಡು...........ಬಿಡು

ಕೆಮ್ಮನಗುಂಡಿ ಟ್ರಿಪ್ ಲಿ ಬರೆದ ಗೀತೆ

ಮಸ್ತಕದ ತವಕ ಹೃದಯದಲ್ಲ್ಯಾಕೋ ಮನದ ಪುಳಕ ಕಂಗಳಲ್ಲ್ಯಾಕೋ ತಿಳಿಯದ ತಾಳದ ತೋಚದ ಗೀಚದ ಅವಳ ಆ ಹಸಿನೆನಪು ಉಸಿರಲ್ಲ್ಯಾಕೋ ಬಿಸಿ ಉಸಿರಲ್ಲ್ಯಾಕೋ............. pa ಮುಗಿಲಿನ ತುದಿಯು ನೆತ್ತಿಯ ತಾಕುತಿದೆ ಮಂಜಿನ ಮುದವು ಮೈ ಸೋಕುತಿದೆ ಮಳೆಯ ಹನಿಯು ಕೈ ಹಾಕುತಿದೆ ಒಲವಿನ ಒಳವೊಳಗೆ ಚಲುವಿನ ಚಳಿಯೊಳಗೆ ಹೇಳೇ ಗೆಳತಿ ಇದೇನಾ ಸ್ವರ್ಗ ಇದೇನಾ ಸ್ವರ್ಗ......... ಮಸ್ತಕದ ಸೌಂದರ್ಯದ ಸಾರವು ತುಂಬಿ ಸೋರುತಿದೆ ಮೋಹಕ ಮುಖವು ಮೌನದಿ ನಗುತಿದೆ ಸುಸ್ವಾಗತದ ಹಾರವು ದಾರಿಯ ಕೊಡುತಿದೆ ಹೇಳೇ ಸಂಗಾತಿ ಇದೇನಾ ಸ್ವರ್ಗ ಇದೇನಾ ಸ್ವರ್ಗ......... ಮ ಸ್ತಕದ

ಓ ಮಳೆಬಿಲ್ಲೆ..

ಕುಂಟಾಬಿಲ್ಲೆ ಆಡೋಣ ಬಾರೆ ಓ ಮಳೆಬಿಲ್ಲೆ ಆಟ ಆಡಿದ್ಮೇಲೆ ಊಟ ಮಾಡಿಸಿ ಕಳಿಸುವೆ ನಿನ್ನನಲ್ಲೆ ಬಾರೆ ರಾಮನ ಬಿಲ್ಲೆ ಪ್ರೇಮದ ಜೆಲ್ಲೆ ಓ ಮಳೆಬಿಲ್ಲೆ ಮುದ್ದು ಮಳೆಬಿಲ್ಲೆ .............. ಪ ಏಳು ರಂಗನು ಹೊಮ್ಮುತ ಏಳು ಹೆಜ್ಜೆಯಲೇ ನೀ ಬಾ ಪ್ರೇಮದ ಹನಿಯ ಚಿಮ್ಮುತ ರಂಗು ರಂಗನೆ ನೀ ತಾ ನನ್ನವಳ ಹಣೆಗೆ ಹಚ್ಚುವೆ ಜೊತೆ ಬಣ್ಣ ಆಡುವೆ ತಾರೆ ತಾರೆ ಓ ಮಳೆಬಿಲ್ಲೆ ನೀ ತಾರೆ ...............ಕುಂಟಾಬಿಲ್ಲೆ ಕವಿತೆ ಬರೆಯೋ ಕವಿಗಳಿಗೆಲ್ಲ ಬೇಟಿ ಮಾಡಿಸುವೆ ಬಾರೆ ಪ್ರೀತಿ ಮಾಡೋ ಹುಡುಗರಿಗೆಲ್ಲ ಚುಕ್ಕಿ ಚಂದ್ರನ ತಾರೆ ನನ್ನ ಊರ ಸುತ್ತಲೆಲ್ಲ ನಿನ್ನ ಬಿಂಬ ಊರೇ ಬಾರೆ ಬಾರೆ ಓ ಮಳೆಬಿಲ್ಲೆ ನೀ ಬಾರೆ ............ ಕುಂಟಾಬಿಲ್ಲೆ

ಒಂದು ಮುತ್ತಿಗಾಗಿ..

ಹೊಂಚು ಹಾಕಲೇನೆ ಸಂಚು ಹೂಡಲೇನೆ ನಿನ್ನ ಒಂದು ಮುತ್ತಿಗಾಗಿ ತಪವ ಕೂರಲೇನೆ ಊಟ ಬಿಡಲೇನೆ ಮಾಟ ಮಾಡಲೇನೆ ಆ ಒಂದು ಹೊತ್ತಿಗಾಗಿ ಚಳುವಳಿ ಮಾಡಲೇನೆ..............ಪ ಮಾತಿನಲೆ ಮೋಡಿ ಮಾಡಿ ಪ್ರತಿದಿನ ಕಾಡಿ ಕನಸಿನಲೇ ನನ್ನ ಕೂಡಿ ಮುತ್ತು ಕೊಡಲೇನೆ ಹರಿಸಿ ಕೈ ರಕ್ತ ಕೊಡಿ ಪ್ರೇಮಪತ್ರ ತೀಡಿ ನನ್ನ ಸುಖವ ನಿಂಗೆ ನೀಡಿ ಪ್ರೀತಿ ಮಾಡಲೇನೆ .................. ಹೊಂಚು ನಿನ್ನ ಕಣ್ಣ ತುಂಬಿ ಹಾರಿ ಮನೆಯ ಕುಂಬಿ ಕತ್ತಲಲೆ ನನ್ನ ರಂಭೆ ಮುತ್ತು ನೀಡಲೇನೆ ನಾನಾಗಿ ಹಾರೋ ದುಂಬಿ ಬಂದಿರುವೆ ನಿನ್ನ ನಂಬಿ ಕುಳಿತು ನಿನ್ನ ಹೂಕೊಂಬೆ ಪ್ರೀತಿ ಮಾಡಲೇನೆ ................... ಹೊಂಚು