ಚೂರು ಚೂರು

ಚೂರು ಚೂರು ಒಂಚೂರು
ಪ್ರೀತಿ ಸಾಕು ಗೆಳತಿ
ಈ ಬದುಕಿಗೆ ಇನ್ನೇನು ಬೇಕು..... ಪ

ತುಡಿತ ಮಿಡಿತ ಬಡಿತ ಶುರುವಾಗದಿದ್ದರೇನು
ನೆನಪು ನೆನಪಾಗಿ ಬರುವದು
ಹಸಿರು ಹೆಸರು ಉಸಿರು ಆಡದಿದ್ದರೇನು
ಕನಸು ಕನಸಾಗಿ ಕಾಡುವದು
ನೀನಿದ್ದರು ಇರದಿದ್ದರೂ ಮೌನ ಮೌನವೇ
ನೀಹೋದರು ನೀಬಂದರು ಧ್ಯಾನ ಧ್ಯಾನವೇ......... ಪ

ಸುಂದರ ಅದರ ಮಧುರ ಜೇನಾಗದಿದ್ದರೇನು
ಸಿಹಿಯ ಸೂಸಿ ಸುರಿಯುವದು
ಚಲುವ ನಿಲುವ ಒಲವ ಸೋಲದಿದ್ದರೇನು
ಹೃದಯ ಬೀಸಿ ಕರೆಯುವದು
ಪ್ರೀತಿಸಿದರು ಇಲ್ಲದಿದ್ದರೂ ಪ್ರೀತಿ ಪ್ರೀತಿಯೇ
ಸಮತ್ತಿಸಿದರು ಇರದಿದ್ದರೂ ಸಮ್ಮತ ಸಮ್ಮತವೇ .... ಪ








Comments

Popular posts from this blog

ಅರಗಿಣಿ..

ನೀನ್ಯಾರಮ್ಮ..??

ಮುಗಿಲು..