Posts

Showing posts from October, 2008

ಬಹುಮಾನ

ಈ ಜಗವು ಕಿರಿದಾಗಿದೆ ನಮ್ಮೀ ಒಲವಲಿ ಈ ಯೌವನ ಹಿರಿದಾಗಿದೆ ಕನಸಿನ ಮಡಿಲಲಿ ಕೇಳಲೇ ನನಕವನವ ಕೇಳುತ ನೀ ನೋಡಲೇ ನನ್ನೀ ಕಣ್ಣಲೆ .......ಪ ಸುಗಂಧ ಬೀರದ ಹೂವಿನ ಹಠಕೆ ನಿಂದ್ಯಾತಕೆ ಕಿರುಕುಳ ಸೂರ್ಯಚಂದ್ರ ಬರದ ನಿಸರ್ಗ ಮಾಟಕೆ ನಿನಗ್ಯಾಕೆ ತಳಮಳ ಬಿಟ್ಟು ಈ ಹುಚ್ಚು ಹಠವ ಕುಣಿಯು ಬಾ ಮನದಾಗೆ ಸುಳಿಸುಳಿದಾಡಿ ಕಳೆ ಬರುವ ಹಾಗೆ ................ ಈ ಜಗವು ಜಾರಿ ಹೋಗುವ ಮಲ್ಲಿಗೆ ಮುಡಿಗೆ ನಿಂದ್ಯತಕೆ ಬಿಗುಮಾನ ಮೋಡ ಕವಿದ ಮಾಯದ ಮುಗಿಲಿಗೆ ನಿಂದೇನಿದೆ ಬಹುಮಾನ ಕೊಟ್ಟು ನಿನ ಮನವ ಹಾಡು ಬಾ ಉಸಿರಾಗೆ ಹೃದಯ ನೆನೆಯುವ ಹಾಗೆ ......................... ಈ ಜಗವು

ಮೊದಲ ಅತಿಥಿ

ಮನಕೆ ಕುಲುಮೆಯಿಟ್ಟರು ಒಲುಮೆ ಸುಡದು ದೇಹಕೆ ಘೋರಿ ಕಟ್ಟಿದರು ನೆನಪು ಮಣ್ಣಾಗದು ನೀ ಕೇಳು ಗೆಳತಿ ಓ ಮೊದಲ ಅತಿಥಿ............ ಪ ಕಣ್ಮುಚ್ಚಿದರು ನಿದ್ದೆ ಬಾರದು ಬಂದರು ಕನ್ನೆ ಮುಚ್ಚದು ನೆನಪಾದರು ಕನಸೇ ಬೀಳದು ಬಿದ್ದರು ಕನಸೇ ಕಾನದು ಏನಿದು ಕತ್ತಲ ಮೌನ ಪದಗಳಿರದ ಬೆತ್ತಲ ಕವನ..................ಮನಕೆ ಕಾಣದ ದಾರಿಯಲಿ ಹೃದಯ ಹೋಗಿದೆ ಪಯಣ ಕಲ್ಲು ಮುಳ್ಳಲಿ ಸಿಲುಕಿ ಆಗಿದೆ ಮರಣ ದಿಕ್ಕಿರರು ಮುಚ್ಚಲು ಮಣ್ಣ ಇನ್ನೆಲ್ಲಿ ಮತ್ತೊಮ್ಮೆ ಜನನ...................ಮನಕೆ

ತಾಜಮಹಲು

ಏನನು ಹೇಳದೆ ಯಾರನು ಕೇಳದೆ ಹೃದಯಕೆ ಚೂರಿಹಾಕಿ ಮನಕೆ ಮಣ್ಣಲಿನೂಕಿ ಸಮಾಧಿ ಕಟ್ಟಿದೆ ನನಹುಗಿದು ಜೀವಂತ ಸಮಾಧಿ ಕಟ್ಟಿದೆ ಇದೇನಾ ನಿನಗೆ ತಾಜಮಹಲು?.. ನಿನದೆ ಅಮಲಲಿ ಕುಳಿತು ಕೆಟ್ಟಚಟವ ಕಲಿತೆ ಬರೋ ದಾರಿಯ ಕಾಯುತ ಓದುಬರಹ ಮರೆತೆ ಬಿಸಿ ನಿಟ್ಟುಸಿರ ಹಾಕುತ ನಿನ್ನಲೇ ನಾ ಬೆರೆತೆ ಅದರೂ ನೀನರಿಯದೆ ಮುಗಿಸಿದಲ್ಲೆ ನಲ್ಲೆ ನನ್ನಾ ಕಥೆ ಪ್ರೇಮದಾ ಕಥೆ ......ಏನನು

ಯಾರಮ್ಮ ನೀನು?

ಒಲಿವುದು ಹಾವ ಕುಣಿವುದು ಭಾವ ನಲಿವುದು ನೋವ ಹಾಡುವುದು ಜೀವ ಕೊಂಡೊಡನೆ ನಿನ್ನನು ಯಾರಮ್ಮ ನೀನು? ....... ಪ ನೋಡಿದರೆ ನಾಚಿಕೊಂಡು ಹೂವಿನಂತೆ ನಗುತಿರುವೆ ಮಾತಾಡಿದರೆ ಮುನಿಸಿಕೊಂಡು ಬಳ್ಳಿಯಂತೆ ಹಬ್ಬುತ್ತಿರುವೆ ನನ್ಹೃದಯದ ದಡ್ಡಿಯಲಿ ಮನದಾಳದ ಮಡ್ಡಿಯಲಿ ಯಾರಮ್ಮ ನೀನು ನನ್ನಲಿ ನಿಂದೇನು ?.............. ಒಲಿವುದು ಮನಸಲಿ ಕೂಡಿಕೊಂಡು ಕನಸನು ಕಾಣುತಿರುವೆ ಉಸಿರಲಿ ಜಾರಿಕೊಂಡು ಕವಿತೆಯ ಬರೆಯುತಿರುವೆ ಕಣ್ಣಿನ ಪುಸ್ತಕದಲಿ ರೇಖೆಗಳ ಹಾಳೆಯಲಿ ಯಾರಮ್ಮ ನೀನು ನನ್ನಲಿ ನಿಂದೇನು ?.............. ಒಲಿವುದು

ನಿನದೆ ನೆನಪು

ಮುಸ್ಸಂಜೆ ಬರದೆ ಮನಸ್ಸು ಮರುಗಿದೆ ಕತ್ತಲು ಕವಿಯದೆ ಕನಸ್ಸು ಕೊರಗಿದೆ ಬೆಳಕು ಬಾರದೆ ಭಾವನೆ ಬೆಂದಿದೆ ನೀನೀರದೆ ನಿನದೆ ನೆನಪು ನನ್ನನೇ ಕೊಂದಿದೆ .................. ಪ ಬಂಜರು ಬದುಕಲು ಬಾಳು ಮುರುಕಲು ಪಂಜರದ ಪಕ್ಷಿಯಲು ಪ್ರಾಣ ಬಡಕಲು ದೇಹದ ಮಡಿಲ ಕಡಲ ನುಡಿಯಲು ಮೋಹದ ಮೊದಲ ತೊದಲ ಮಾತಲೂ ಒಲವೆ ಚೆಲುವಾಗಿದೆ ಉಸಿರೇ ಹಸಿರಾಗಿದೆ ಆ ಒಲವಲಿ ಇ ಉಸಿರಲಿ .........................ಮುಸ್ಸಂಜೆ ಗಾಯದ ಗುರುತಿನ ಚೀಟಿ ಚಿರಕಾಲ ಹೃದಯ ಮಿಡಿತದ ಬಡಿತ ಸ್ವಲ್ಪಕಾಲ ನಗು ನಗುತ ನಗಿಸು ಪ್ರತಿಕಾಲ ಪ್ರೀತಿ ಪ್ರೀತಿಸುತ ಪ್ರೀತಿಸು ಪ್ರೀತಿಕಾಲ ಹುಟ್ಟು ಒರವಾದರೆ ಒಳ್ಳೆಕಾಲ ಸಾವು ಕೊನೆಯಾದರೆ ಕೆಟ್ಟಕಾಲ ಈ ಜಗದಲಿ ಪ್ರೇಮದ ಸಾಗರದಲಿ ................ ಮುಸ್ಸಂಜೆ

ಕೆ.ಯ.ಎಸ್ ಪರೀಕ್ಷೆಲಿ ಬರೆದ ಹಾಡು

ಓ ಗೆಳತಿ ನೀನೇ ಒಡತಿ ಪ್ರಾಣ ಹಿಂಡುತಿ ಜೀವ ತಿನ್ನುತಿ ಸುಮ್ಮನೆ ಕೂರದೆ ಕಾಡುತಿ ನನ್ನನೇ ಸಾಯಿಸಿ ಬಿಡುತಿ ಪ ಕಣ್ಣಿನ ಕವನದೊಳಗೂನೂ ಪದಗಳ ಪಲ್ಲವಿಯಿರದೇನು? ಮೌನದ ಮನಸಿನೋಳಗೂನೂ ಹೃದಯಗಳ ಪಯನವಿರದೇನು? ಸನಿಹ ಬರದಿರೆ ನೋಟ ಬೀರದಿರೆ ಒಲವು ಮೂಡದೇನು?.................... ಓ ಗೆಳತಿ ಹಣದ ಕೊರತೆಯೋಳಗೂನೂ ಕಲಿಯೋ ಕನಸಿಲ್ಲವೇನು ? ಸಾಯೋ ಜೀವದೊಳಗೂನೂ ಬದುಕೋ ಆಶೆಯಿಲ್ಲವೇನು ನೋವು ಕೊಡದಿರೆ ದೂರ ಆಗದಿರೇ ಪ್ರೇಮ ಆಗದೇನು......... ಓ ಗೆಳತಿ

ಮೌನ ಗೀತೆ

ನನ್ನೀ ಮನದಿ ಮಧುರ ಮೌನ ಗೀತೆಯಾದೆ ನನ್ನೀ ಕಣ್ಣಿಗೆ ಕಾಣದ ಮಾಯಾ ಜಾಲವಾದೆ ಅಹಾ ಏನಿದು ಸೋಜಿಗ ಅರಿಯದ ಜೀವಕೆ ಒಲವಿನ ಸುಯೋಗ ಪ ಪ್ರಣಯದ ಸುಳಿಯಲಿ ಸುಳಿದಾಡಿ ಮುಜುಗುರ ಮೂಡಿಸಿದೆ ಹೃದಯ ಅಂಗಳದಿ ಓಡಾಡಿ ಗುಸುಗುಸು ಮಾತಾಡಿದೆ ಯೌವನ ಎದೆಯಲಿ ಜಿಗಿದಾಡಿ ಮುದಿತನ ಮರೆಯಾಗಿಸಿದೆ ಒಲವೆ ನಿನಗೆ ಚಿರಋಣಿ ಎಂದೆಂದಿಗೂ ನಾ ಚಿರಋಣಿ ........ ಪ ಉಸಿರ ಹಸಿರಲಿ ಹರಿದಾಡಿ ಸಡಗರ ಮೂಡಿಸಿದೆ ಮನದ ಕಣದಲಿ ಕುಣಿದಾಡಿ ಸೊಗಸ ಸವಿಯಾಗಿಸಿದೆ ಮಾನಸ ಕನಸಲಿ ಕಸಿಮಾಡಿ ಪ್ರೇಮವ ಪೂಜೆಯಾಗಿಸಿದೆ ಒಲವೆ ನಿನಗೆ ಚಿರಋಣಿ ಎಂದೆಂದಿಗೂ ನಾ ಚಿರಋಣಿ ........ ಪ

ಅಮ್ಮ..

ಜನಿಸಿ ಜನ್ಮವೆತ್ತಿ ಧರೆಯ ಸುತ್ತಿಸುತ್ತಿ ಕಷ್ಟ ನೀನೇ ಪಟ್ಟಿ ಸುಖವ ನನಗೆ ಬಿಟ್ಟಿ ಅಮ್ಮ ಅಮ್ಮ ನೀನೇ ದೈವವೋ ಅಮ್ಮ ಅಮ್ಮ ನೀನೇ ಜೀವವೋ ...... ಪ