ನೀ ಬಾ..
ನೀ ಬಾ ನೀ ಬಾ ನನ್ನೊಳಗೆ ನಗಲು ನೀ ಬಾ ನೀ ತಾ ನೀ ತಾ ನನ್ನೊಳಗೆ ಹಗಲು ನೀ ತಾ ಮುಗಿಲು ಜಗಲಿ ಏರಲು ಮನದಲಿ ನೀನಿರಲು ಒಲುಮೆಯ ಚಿಲುಮೆ ನೀ ಚೆಲ್ಲು.. ಪ ಈ ಹೃದಯಕೆ ನಿನ ಭಾವನೆಗಳ ಕಸಿ ಮಾಡಬಾರದೇ ಈ ಉಸಿರಿಗೆ ನಿನ ನಯನಗಳ ಧಾನ ಮಾಡಬಾರದೇ ನಿನ ಭಾವನೆಗಳ ಅನುಭವಿಸುತ ನಿನ ನಯನಗಳಿಂದ ಲೇ ಜಗನೋಡುತ ಉಲ್ಲಾಸದಿ ಉಸಿರಾಡುತಿದ್ದೆ ಮರೆತು ನನ್ನೆಲ್ಲ ನಿದ್ದೆ............. ನೀ ಬಾ ಈ ನೆನಪಿಗೆ ನಿನ ಕನಸುಗಳ ಬೆನ್ನು ಹಚ್ಚಬಾರದೇ ಈ ಕನಸಿಗೆ ನಿನ ನೆನಪುಗಳ ತೂರಿ ಬಿಡಬಾರದೇ ನಿನ ಕನಸುಗಳ ಕಾಯುತ ನಿನ ನೆನಪುಗಳ ಸವಿಯುತ ಉನ್ಮಾದದಿ ಜಿಗಿದಾಡುತಿದ್ದೆ ಅರಿತು ನನ್ನೆಲ್ಲ ಪದ್ಯ .................... ನೀ ಬಾ