Posts

ಮೊದಲ ಗೆಳತಿಯಾಗಿ ಮನದಲಿ ಮೊಹಬ್ಬತ್ ತಂದೆ ಜೀವಕೆ ಜೊತೆಯಾಗಿ ಕಣ್ಣಲಿ ಕ್ಕ್ಹುಬಸುರತ್ ತಂದೆ ಗುರಿಗೆ ಸ್ಪೂರ್ತಿಯಾಗಿ ಹೃದಯದಲಿ ಹಕ್ಖಿಕ್ಖತ್ ತಂದೆ ಓ ಡಿಯರ ಐ ಲವ್ ಯು ಓ ಡಿಯರ ಐ ಮಿಸ್ ಯು ........|| ಪ || ಅಮವಾಷ್ಯ ಕತ್ತಲ ಕವಿದು ನನ್ನೀ ಜೀವವ ಗೀಚಿದೆ ಹುಣ್ಣಿಮೆ ಬೆಳಕ ಹರಿದು ನನ್ನೀ ಪ್ರೇಮವ ದೋಚಿದೆ ಗೀಚಿ ದೋಚಿದ ಗೆಳತಿ ನಿನಗೊಂದನೆ ಏಳೇಳು ಜನ್ಮದ ಕೋಟಿ ಅಭಿನಂದನೆ............|| ಮೊದಲ || ಮುಗಿಲಿನಂತೆ ವಿಶಾಲತೆ ತಳೆದು ಇಡಿ ಜಗವ ಸುತ್ತಿದೆ ಧರೆಯಂತೆ ದಿಲ್ಲನ್ನಾ ತೆರೆದು ನನ್ನೀ ದೇಹವ ಮುಟ್ಟಿದೆ ಸುತ್ತಿ ಮುಟ್ಟಿದ ಗೆಳತಿ ನಿನಗೊಮ್ದನೆ ನೂರಾರು ಯುಗದ ಕೋಟಿ ಅಭಿನಂದನೆ...........|| ಮೊದಲ ||

ಚೂರು ಚೂರು

ಚೂರು ಚೂರು ಒಂಚೂರು ಪ್ರೀತಿ ಸಾಕು ಗೆಳತಿ ಈ ಬದುಕಿಗೆ ಇನ್ನೇನು ಬೇಕು..... ಪ ತುಡಿತ ಮಿಡಿತ ಬಡಿತ ಶುರುವಾಗದಿದ್ದರೇನು ನೆನಪು ನೆನಪಾಗಿ ಬರುವದು ಹಸಿರು ಹೆಸರು ಉಸಿರು ಆಡದಿದ್ದರೇನು ಕನಸು ಕನಸಾಗಿ ಕಾಡುವದು ನೀನಿದ್ದರು ಇರದಿದ್ದರೂ ಮೌನ ಮೌನವೇ ನೀಹೋದರು ನೀಬಂದರು ಧ್ಯಾನ ಧ್ಯಾನವೇ......... ಪ ಸುಂದರ ಅದರ ಮಧುರ ಜೇನಾಗದಿದ್ದರೇನು ಸಿಹಿಯ ಸೂಸಿ ಸುರಿಯುವದು ಚಲುವ ನಿಲುವ ಒಲವ ಸೋಲದಿದ್ದರೇನು ಹೃದಯ ಬೀಸಿ ಕರೆಯುವದು ಪ್ರೀತಿಸಿದರು ಇಲ್ಲದಿದ್ದರೂ ಪ್ರೀತಿ ಪ್ರೀತಿಯೇ ಸಮತ್ತಿಸಿದರು ಇರದಿದ್ದರೂ ಸಮ್ಮತ ಸಮ್ಮತವೇ .... ಪ

ನೀ ಬಾ..

ನೀ ಬಾ ನೀ ಬಾ ನನ್ನೊಳಗೆ ನಗಲು ನೀ ಬಾ ನೀ ತಾ ನೀ ತಾ ನನ್ನೊಳಗೆ ಹಗಲು ನೀ ತಾ ಮುಗಿಲು ಜಗಲಿ ಏರಲು ಮನದಲಿ ನೀನಿರಲು ಒಲುಮೆಯ ಚಿಲುಮೆ ನೀ ಚೆಲ್ಲು.. ಪ ಈ ಹೃದಯಕೆ ನಿನ ಭಾವನೆಗಳ ಕಸಿ ಮಾಡಬಾರದೇ ಈ ಉಸಿರಿಗೆ ನಿನ ನಯನಗಳ ಧಾನ ಮಾಡಬಾರದೇ ನಿನ ಭಾವನೆಗಳ ಅನುಭವಿಸುತ ನಿನ ನಯನಗಳಿಂದ ಲೇ ಜಗನೋಡುತ ಉಲ್ಲಾಸದಿ ಉಸಿರಾಡುತಿದ್ದೆ ಮರೆತು ನನ್ನೆಲ್ಲ ನಿದ್ದೆ............. ನೀ ಬಾ ಈ ನೆನಪಿಗೆ ನಿನ ಕನಸುಗಳ ಬೆನ್ನು ಹಚ್ಚಬಾರದೇ ಈ ಕನಸಿಗೆ ನಿನ ನೆನಪುಗಳ ತೂರಿ ಬಿಡಬಾರದೇ ನಿನ ಕನಸುಗಳ ಕಾಯುತ ನಿನ ನೆನಪುಗಳ ಸವಿಯುತ ಉನ್ಮಾದದಿ ಜಿಗಿದಾಡುತಿದ್ದೆ ಅರಿತು ನನ್ನೆಲ್ಲ ಪದ್ಯ .................... ನೀ ಬಾ
Image
ಇವರು ನನ್ನ ಆತ್ಮಿಯ ಸ್ನೇಹಿತ ಮನೋಜ್ ದೇಶಪಾಂಡೆ.... ಒಬ್ಬ ಒಳ್ಳೆಯ ಸ್ನೇಹಿತ ಅಷ್ಟೆ ಅಲ್ಲ ಒಳ್ಳೆಯ ಕವಿ(ಸಾಹಿತಿ) ಕೂಡ ಮತ್ತೆ ಒಂದೇ ಕಂಪನಿಲಿ ಕೆಲಸ ಮಾಡ್ತಿದ್ದಿವಿ... ಇವರು ಬರೆಯೋ ಕವಿತೆಗಳು ನನಗೆ ತುಂಬ ಇಷ್ಟ.. ಸರಳ ಜೀವನ ಸರಳ ಉಡುಪು ಸರಳ ನಡೆ ಸರಳ ಮಾತು ಸರಳ ಸ್ನೇಹ ಸರಳ ಪ್ರೀತಿ ಸರಳ ನಗು ಇವರ ಜೀವನದಲಿ ಅಳವಡಿಸಿಕೊಂಡಿರೋ ಸರಳ ಸ್ವಭಾವ. ಇವರೊಡನೆ ಮಾತಾಡಲು ಕುಳಿತರೆ ಸಮಯ ಸಾಲುವದಿಲ್ಲ.. ಇವರ ಸ್ನೇಹ ಪಡೆಯುವ ಭಾಗ್ಯ ಪಡೆದುಕೊಂಡ ನಾ ನಿಜವಾಗಿಲು ಧನ್ಯ....

ನೀನ್ಯಾರಮ್ಮ..??

Image
ನನ್ನೊಳಗೊಂದು ನನಗರಿವಿರದ ನಯನವೊಂದು ಕಣ್ತೆರೆದು ಕಾಯುತಿದೆ ನಿನ ನೋಡಲೆಂದು ಕಣ್ಣಲೆ ತುಂಬಲೆಂದು ಮಲ್ಲಿಗೆನಾ ಸಂಪಿಗೆನಾ ನೀನ್ಯಾರಮ್ಮ ಎದುರು ಬಾಯಿಂದು ಗುಲಾಬಿನಾ ಕಮಲನಾ ನೀನ್ಯಾರಮ್ಮ ಸನಿಹ ಬಾಯಿಂದು..... ಪ ನಿನ ಬಿಸಿಉಸಿರು ಸೋಕದೆ ನನ ಉಸಿರು ಉಸಿರು ಬಿಡುತಿದೆ ನಿನ ಹುಸಿನೆನಪು ತಾಕದೆ ನನ ಹೃದಯ ಬಡಿತ ತಪ್ಪುತಿದೆ ನಲ್ಮೆಯ ನಲಗೋ ನಕ್ಷತ್ರನಾ ಚಂದ್ರನ ಸೆಳೆಯೋ ಚೈತ್ರನಾ ನೀನ್ಯಾರಮ್ಮ ನೀನ್ಯಾರಮ್ಮ ಎದುರು ಬಾಯಿಂದು... ನನ್ನೊಳಗೊಂದು ನಿನ ಅತಿಸುಂದರ ಮೊಗ ನೋಡೋ ತವಕ ಚಡಪಡಿಸುತಿದೆ ನಿನ ಮೌನದ ಮುತ್ತಿನ ನಗೆ ಕದಿಯೋವಾಶೆ ಹಾತೊರೆಯುತಿದೆ ನಾಚುತ ಕುಣಿಯೋ ನವಿಲೇನಾ ಸಂದೇಶ್ ರವಾನಿಸೋ ಪಾರಿವಾಳನಾ ನೀನ್ಯಾರಮ್ಮ ನೀನ್ಯಾರಮ್ಮ ಎದುರು ಬಾಯಿಂದು... ನನ್ನೊಳಗೊಂದು ನಿನ ಪೂಜೆಗೆ ಮುರ್ತಿಯಿರದೆ ನನ ಮನಸು ಕೊರಗುತಿದೆ ನಿನ ಹುಡುಕಿ ತರಲೆಂದೇ ನನ ಕನಸು ಬೆನ್ನು ಹತ್ತಿದೆ ಮುಚ್ಚಿದ ಚಿನ್ನದ ಘಣಿನಾ ಹೊಳೆವಾ ವಜ್ರದ ಮಣಿನಾ ನೀನ್ಯಾರಮ್ಮ ನೀನ್ಯಾರಮ್ಮ ಎದುರು ಬಾಯಿಂದು... ನನ್ನೊಳಗೊಂದು

ಹೊಸ ವರ್ಷ

ಹಳೆ ವರ್ಷ ಹೊಸತಾಗಿ ಹೊಸ ವರ್ಷ ಬಂದರೂ ಹಳೆ ಭಾವ ಹೊಸತಾಗಿ ಹೊಸಭಾವ ಬರಲಿಲ್ಲ ಹಳೆ ಹಳೆಯಕೆ ಹೊಸ ಹೊಸತನು ಲೇಪನ ಮಾಡಿದರೂ ಹೊಸ ಹೊಸತು ಹಳೆಯದಾಗಿ ಹೋಗುವದಲ್ಲಾ ಅದರೂ ಹೊಸ ವರ್ಷಕೆ ಹೊಸ ಹರ್ಷಕೆ ಹೊಸತಾಗಿ ಹೆಜ್ಜೆಯ ಹಾಕೋಣ ಬನ್ನಿ ಕಹಿಕ್ಷಣಗಳ ಮರೆತು ಸಿಹಿದಿನಗಳ ನೆನೆಸಿ ಸವಿ ಸವಿಯಾಗಿ ಬಾಳೋಣ ಬನ್ನಿ...

ಯುವರಾಣಿ..

ನೀ ದೂರಾದರೆ ನೀ ದೂರಾದರೆ ಕುಳಿತು ಕುಳಿತಲೇ ಜೀವ ಬಿಡುವೆ ನಿಂತು ನಿಂತಲೇ ಪ್ರಾಣ ಕೊಡುವೆ ಓ ಹೃದಯ ಧರಣಿಯ ಮಹಾರಾಣಿ ಮನದ ಮಹಲಿನ ಯುವರಾಣಿ.............. ಪ ಕ್ಷಣ ಕ್ಷಣಕೊಮ್ಮೆಮರೆಯದೆ ಸುತ್ತು ಹಾಕೋ ಗಡಿಯಾರದ ಮುಳ್ಳಂತೆ ನಿನ್ನ ಪ್ರೇಮದ ಹುತ್ತನೆ ಸುತ್ತುವೆ ದಿನ ದಿನಕೊಮ್ಮೆ ಮರೆಯದೆ ದಿನ ಬದಲಿಸಿಕೊಳ್ಳೋ ಗೋಡೆಯ ಕ್ಯಾಲೆಂಡರಿನಂತೆ ನಿನ್ನ ಮುಡಿಗೆ ಹೂವಾಗಿ ಕೂರುವೆ ಪ್ರೀತಿಸು ಪ್ರೆಮಿಸು ಪ್ರಣ ಯಿಸು ದೂರಾಗದೆ ದೇವದಾಸರ ಗುಂಪಿಗೆ ಹುಚ್ಚೆದ್ದು ಮಾರಿ ಹೋಗದೆ................ ನೀ ಹೋದ ಕಡೆಯಲ್ಲ ಕಾಡದೇ ತಂಪನೆ ನೆರಳಂತೆ ನಿನ ಹಿಂದೇನೆ ಅಲೆಯುವೆ ನೀ ನಕ್ಕಾಗಲೆಲ್ಲ ನೋಡದೆ ನಿನ ನಗುವಿನ ಆ ಹೂವಿನಂತೆ ನಿನ ನಗುವಿಗೆ ಮಗುವಾಗುವೆ ಒಪ್ಪಿಕೊ ಅಪ್ಪಿಕೋ ತಬ್ಬಿಕೋ ದೂರಾಗದೆ ಹುಚ್ಚರ ಆಸ್ಪತ್ರೆಗೆ ದಾಖಲು ಮಾಡದೆ................. ನೀ