ನೀ ಬಾ..

ನೀ ಬಾ ನೀ ಬಾ ನನ್ನೊಳಗೆ
ನಗಲು ನೀ ಬಾ
ನೀ ತಾ ನೀ ತಾ ನನ್ನೊಳಗೆ
ಹಗಲು ನೀ ತಾ
ಮುಗಿಲು ಜಗಲಿ ಏರಲು
ಮನದಲಿ ನೀನಿರಲು
ಒಲುಮೆಯ ಚಿಲುಮೆ ನೀ ಚೆಲ್ಲು.. ಪ

ಈ ಹೃದಯಕೆ ನಿನ ಭಾವನೆಗಳ
ಕಸಿ ಮಾಡಬಾರದೇ
ಈ ಉಸಿರಿಗೆ ನಿನ ನಯನಗಳ
ಧಾನ ಮಾಡಬಾರದೇ
ನಿನ ಭಾವನೆಗಳ ಅನುಭವಿಸುತ
ನಿನ ನಯನಗಳಿಂದಲೇ ಜಗನೋಡುತ
ಉಲ್ಲಾಸದಿ ಉಸಿರಾಡುತಿದ್ದೆ
ಮರೆತು ನನ್ನೆಲ್ಲ ನಿದ್ದೆ............. ನೀ ಬಾ

ಈ ನೆನಪಿಗೆ ನಿನ ಕನಸುಗಳ
ಬೆನ್ನು ಹಚ್ಚಬಾರದೇ
ಈ ಕನಸಿಗೆ ನಿನ ನೆನಪುಗಳ
ತೂರಿ ಬಿಡಬಾರದೇ
ನಿನ ಕನಸುಗಳ ಕಾಯುತ
ನಿನ ನೆನಪುಗಳ ಸವಿಯುತ
ಉನ್ಮಾದದಿ ಜಿಗಿದಾಡುತಿದ್ದೆ
ಅರಿತು ನನ್ನೆಲ್ಲ ಪದ್ಯ .................... ನೀ ಬಾ





Comments

Popular posts from this blog

ಅರಗಿಣಿ..

ನೀನ್ಯಾರಮ್ಮ..??

ಮುಗಿಲು..