ಮುಗಿಲು..
ಹ್ರುದಯಾಳದಿ ನಿಂತು ಮುಗಿಲು
ನೋಡಿದರೆ ಕೆಂಪು ಕೆಂಪು
ಕಂಗಳಾಳದಿ ಕುಳಿತು ಮುಗಿಲು
ನೋಡಿದರೆ ಕಪ್ಪು ಬಿಳುಪು
ಏನಿದು ಒಂದೇ ದೇಹದಿ
ವಿಧ ವಿಧ ಭಾವನೆ.................... ಪ
ರಸ್ತೆಯಲಿ ನಡೆಯೋ ಅಪಘಾತಗಳಿಗಂಜಿ
ಎದೆಯ ಪಕ್ಕೆಲಬುಗಳಲಿ
ಬಚ್ಚಿ ಕುಳಿತಿದೆ ಹೃದಯ
ಕುಳಿತಲ್ಲೇ ಕುಡಿದು ಪ್ರೀತಿಯ ಗಂಜಿ
ಸುಳಿದಾಡಿ ಪರಿಧಿಯಲಿ
ನೆಗ್ಗಿ ಹೋಗಿದೆ ಬಿದ್ದು ಪ್ರೀತಿಯ ಪಡಸಾಲೆಯಲಿ.............. ಹ್ರುದಯಾಳದಿ
ಅಂದ ಚಂದವನು ಸವಿಯೋವಾಶೆಗಾಗಿ
ಮುಖದ ಮೇಲೆ
ಮಿನ ಮಿನಗುತಿದೆ ಕಣ್ಣು
ಮಿನಗುತಲೆ ಪ್ರೇಮದ
ಭಂದನದಲಿ ಸಿಲುಕಿ
ತನ್ನ ತಾ ಬಿಡಿಸಿಕೊಳ್ಳಲಾಗಿದೆ
ಕಣ್ಣೀರ ದಾಸನಾಗಿ ಕಣ್ಣು ಕಣ್ಣಲೆ ಕುಗ್ಗಿ ಹೋಗಿದೆ ................. ಹ್ರುದಯಾಳದಿ
ನೋಡಿದರೆ ಕೆಂಪು ಕೆಂಪು
ಕಂಗಳಾಳದಿ ಕುಳಿತು ಮುಗಿಲು
ನೋಡಿದರೆ ಕಪ್ಪು ಬಿಳುಪು
ಏನಿದು ಒಂದೇ ದೇಹದಿ
ವಿಧ ವಿಧ ಭಾವನೆ.................... ಪ
ರಸ್ತೆಯಲಿ ನಡೆಯೋ ಅಪಘಾತಗಳಿಗಂಜಿ
ಎದೆಯ ಪಕ್ಕೆಲಬುಗಳಲಿ
ಬಚ್ಚಿ ಕುಳಿತಿದೆ ಹೃದಯ
ಕುಳಿತಲ್ಲೇ ಕುಡಿದು ಪ್ರೀತಿಯ ಗಂಜಿ
ಸುಳಿದಾಡಿ ಪರಿಧಿಯಲಿ
ನೆಗ್ಗಿ ಹೋಗಿದೆ ಬಿದ್ದು ಪ್ರೀತಿಯ ಪಡಸಾಲೆಯಲಿ.............. ಹ್ರುದಯಾಳದಿ
ಅಂದ ಚಂದವನು ಸವಿಯೋವಾಶೆಗಾಗಿ
ಮುಖದ ಮೇಲೆ
ಮಿನ ಮಿನಗುತಿದೆ ಕಣ್ಣು
ಮಿನಗುತಲೆ ಪ್ರೇಮದ
ಭಂದನದಲಿ ಸಿಲುಕಿ
ತನ್ನ ತಾ ಬಿಡಿಸಿಕೊಳ್ಳಲಾಗಿದೆ
ಕಣ್ಣೀರ ದಾಸನಾಗಿ ಕಣ್ಣು ಕಣ್ಣಲೆ ಕುಗ್ಗಿ ಹೋಗಿದೆ ................. ಹ್ರುದಯಾಳದಿ
Comments