ಮೌನ ಗೀತೆ
ನನ್ನೀ ಮನದಿ ಮಧುರ
ಮೌನ ಗೀತೆಯಾದೆ
ನನ್ನೀ ಕಣ್ಣಿಗೆ ಕಾಣದ
ಮಾಯಾ ಜಾಲವಾದೆ
ಅಹಾ ಏನಿದು ಸೋಜಿಗ
ಅರಿಯದ ಜೀವಕೆ ಒಲವಿನ ಸುಯೋಗ ಪ
ಪ್ರಣಯದ ಸುಳಿಯಲಿ ಸುಳಿದಾಡಿ
ಮುಜುಗುರ ಮೂಡಿಸಿದೆ
ಹೃದಯ ಅಂಗಳದಿ ಓಡಾಡಿ
ಗುಸುಗುಸು ಮಾತಾಡಿದೆ
ಯೌವನ ಎದೆಯಲಿ ಜಿಗಿದಾಡಿ
ಮುದಿತನ ಮರೆಯಾಗಿಸಿದೆ
ಒಲವೆ ನಿನಗೆ ಚಿರಋಣಿ
ಎಂದೆಂದಿಗೂ ನಾ ಚಿರಋಣಿ ........ ಪ
ಉಸಿರ ಹಸಿರಲಿ ಹರಿದಾಡಿ
ಸಡಗರ ಮೂಡಿಸಿದೆ
ಮನದ ಕಣದಲಿ ಕುಣಿದಾಡಿ
ಸೊಗಸ ಸವಿಯಾಗಿಸಿದೆ
ಮಾನಸ ಕನಸಲಿ ಕಸಿಮಾಡಿ
ಪ್ರೇಮವ ಪೂಜೆಯಾಗಿಸಿದೆ
ಒಲವೆ ನಿನಗೆ ಚಿರಋಣಿ
ಎಂದೆಂದಿಗೂ ನಾ ಚಿರಋಣಿ ........ ಪ
ಮೌನ ಗೀತೆಯಾದೆ
ನನ್ನೀ ಕಣ್ಣಿಗೆ ಕಾಣದ
ಮಾಯಾ ಜಾಲವಾದೆ
ಅಹಾ ಏನಿದು ಸೋಜಿಗ
ಅರಿಯದ ಜೀವಕೆ ಒಲವಿನ ಸುಯೋಗ ಪ
ಪ್ರಣಯದ ಸುಳಿಯಲಿ ಸುಳಿದಾಡಿ
ಮುಜುಗುರ ಮೂಡಿಸಿದೆ
ಹೃದಯ ಅಂಗಳದಿ ಓಡಾಡಿ
ಗುಸುಗುಸು ಮಾತಾಡಿದೆ
ಯೌವನ ಎದೆಯಲಿ ಜಿಗಿದಾಡಿ
ಮುದಿತನ ಮರೆಯಾಗಿಸಿದೆ
ಒಲವೆ ನಿನಗೆ ಚಿರಋಣಿ
ಎಂದೆಂದಿಗೂ ನಾ ಚಿರಋಣಿ ........ ಪ
ಉಸಿರ ಹಸಿರಲಿ ಹರಿದಾಡಿ
ಸಡಗರ ಮೂಡಿಸಿದೆ
ಮನದ ಕಣದಲಿ ಕುಣಿದಾಡಿ
ಸೊಗಸ ಸವಿಯಾಗಿಸಿದೆ
ಮಾನಸ ಕನಸಲಿ ಕಸಿಮಾಡಿ
ಪ್ರೇಮವ ಪೂಜೆಯಾಗಿಸಿದೆ
ಒಲವೆ ನಿನಗೆ ಚಿರಋಣಿ
ಎಂದೆಂದಿಗೂ ನಾ ಚಿರಋಣಿ ........ ಪ
Comments