ಬಹುಮಾನ

ಈ ಜಗವು ಕಿರಿದಾಗಿದೆ
ನಮ್ಮೀ ಒಲವಲಿ
ಈ ಯೌವನ ಹಿರಿದಾಗಿದೆ
ಕನಸಿನ ಮಡಿಲಲಿ
ಕೇಳಲೇ ನನಕವನವ
ಕೇಳುತ ನೀ ನೋಡಲೇ ನನ್ನೀ ಕಣ್ಣಲೆ .......ಪ

ಸುಗಂಧ ಬೀರದ ಹೂವಿನ ಹಠಕೆ
ನಿಂದ್ಯಾತಕೆ ಕಿರುಕುಳ
ಸೂರ್ಯಚಂದ್ರ ಬರದ ನಿಸರ್ಗ ಮಾಟಕೆ
ನಿನಗ್ಯಾಕೆ ತಳಮಳ
ಬಿಟ್ಟು ಈ ಹುಚ್ಚು ಹಠವ
ಕುಣಿಯು ಬಾ ಮನದಾಗೆ
ಸುಳಿಸುಳಿದಾಡಿ ಕಳೆ ಬರುವ ಹಾಗೆ ................ ಈ ಜಗವು

ಜಾರಿ ಹೋಗುವ ಮಲ್ಲಿಗೆ ಮುಡಿಗೆ
ನಿಂದ್ಯತಕೆ ಬಿಗುಮಾನ
ಮೋಡ ಕವಿದ ಮಾಯದ ಮುಗಿಲಿಗೆ
ನಿಂದೇನಿದೆ ಬಹುಮಾನ
ಕೊಟ್ಟು ನಿನ ಮನವ
ಹಾಡು ಬಾ ಉಸಿರಾಗೆ
ಹೃದಯ ನೆನೆಯುವ ಹಾಗೆ ......................... ಈ ಜಗವು


Comments