ಹೃದಯಾನೆ ಇರದಿದ್ದರೆ ಪ್ರೀತಿಯಲ್ಲಿರತ್ತಿತ್ತೋ ಪ್ರೀತಿ ಮಾಡೋರು ಯಲ್ಲಿರತಿದ್ರೋ ಪ್ರೀತಿನೇ ಇರದಿದ್ದರೆ ಪ್ರಪಂಚವೆಲ್ಲಿರತ್ತಿತ್ತೋ ಪ್ರಪಂಚ ಕಾಯೋರು ಯಾರಿರತಿದ್ರೋ ಯಾರಿಗೊತ್ತೋ ಯಾರಿಗೊತ್ತೋ ಬೇಡ ಬಿಡು ಹುಡುಗಿ ಇಲ್ಲದ ಸಲ್ಲದ ಪ್ರಶ್ನೆ ನಮಗೆಕಲ್ಲವೇ........ ಪ ಶಾಲೆಗೆ ಹೊತ್ತೊಯ್ಯೂ ಪುಸ್ತಕ ಚೀಲವಾಗಿ ನನ್ನ ಹೆಗಲವೇರಿ ಕುಳಿತಿಕೋ ಪುಸ್ತಕದ ಮಡಿಲಲಿ ರೋಚಕ ನವಿಲಾಗಿ ನಿನ್ನಷ್ಟಕ್ಕೆ ನೀ ಕುಣಿದಿಕೋ ಕೇಳೋರು ಯಾರು ಹೇಳೋರು ಯಾರು ಕುಳಿತರು ಕುಣಿದರು ನನ್ನ ಅರಗಿಣಿ ಹೃದಯಗಿಣಿ ಜೇನಿನಹನಿ ವಜ್ರದ ಮಣಿ ...... ಹೃದಯಾನೆ
ಹ್ರುದಯಾಳದಿ ನಿಂತು ಮುಗಿಲು ನೋಡಿದರೆ ಕೆಂಪು ಕೆಂಪು ಕಂಗಳಾಳದಿ ಕುಳಿತು ಮುಗಿಲು ನೋಡಿದರೆ ಕಪ್ಪು ಬಿಳುಪು ಏನಿದು ಒಂದೇ ದೇಹದಿ ವಿಧ ವಿಧ ಭಾವನೆ.................... ಪ ರಸ್ತೆಯಲಿ ನಡೆಯೋ ಅಪಘಾತಗಳಿಗಂಜಿ ಎದೆಯ ಪಕ್ಕೆಲಬುಗಳಲಿ ಬಚ್ಚಿ ಕುಳಿತಿದೆ ಹೃದಯ ಕುಳಿತಲ್ಲೇ ಕುಡಿದು ಪ್ರೀತಿಯ ಗಂಜಿ ಸುಳಿದಾಡಿ ಪರಿಧಿಯಲಿ ನೆಗ್ಗಿ ಹೋಗಿದೆ ಬಿದ್ದು ಪ್ರೀತಿಯ ಪಡಸಾಲೆಯಲಿ.............. ಹ್ರುದಯಾಳದಿ ಅಂದ ಚಂದವನು ಸವಿಯೋವಾಶೆಗಾಗಿ ಮುಖದ ಮೇಲೆ ಮಿನ ಮಿನಗುತಿದೆ ಕಣ್ಣು ಮಿನಗುತಲೆ ಪ್ರೇಮದ ಭಂದನದಲಿ ಸಿಲುಕಿ ತನ್ನ ತಾ ಬಿಡಿಸಿಕೊಳ್ಳಲಾಗಿದೆ ಕಣ್ಣೀರ ದಾಸನಾಗಿ ಕಣ್ಣು ಕಣ್ಣಲೆ ಕುಗ್ಗಿ ಹೋಗಿದೆ ................. ಹ್ರುದಯಾಳದಿ
Comments