ಕೆ.ಯ.ಎಸ್ ಪರೀಕ್ಷೆಲಿ ಬರೆದ ಹಾಡು

ಓ ಗೆಳತಿ ನೀನೇ ಒಡತಿ
ಪ್ರಾಣ ಹಿಂಡುತಿ ಜೀವ ತಿನ್ನುತಿ
ಸುಮ್ಮನೆ ಕೂರದೆ ಕಾಡುತಿ
ನನ್ನನೇ ಸಾಯಿಸಿ ಬಿಡುತಿ ಪ

ಕಣ್ಣಿನ ಕವನದೊಳಗೂನೂ
ಪದಗಳ ಪಲ್ಲವಿಯಿರದೇನು?
ಮೌನದ ಮನಸಿನೋಳಗೂನೂ
ಹೃದಯಗಳ ಪಯನವಿರದೇನು?
ಸನಿಹ ಬರದಿರೆ ನೋಟ ಬೀರದಿರೆ
ಒಲವು ಮೂಡದೇನು?.................... ಓ ಗೆಳತಿ

ಹಣದ ಕೊರತೆಯೋಳಗೂನೂ
ಕಲಿಯೋ ಕನಸಿಲ್ಲವೇನು ?
ಸಾಯೋ ಜೀವದೊಳಗೂನೂ
ಬದುಕೋ ಆಶೆಯಿಲ್ಲವೇನು
ನೋವು ಕೊಡದಿರೆ ದೂರ ಆಗದಿರೇ
ಪ್ರೇಮ ಆಗದೇನು......... ಓ ಗೆಳತಿ

Comments

Popular posts from this blog

ಅರಗಿಣಿ..

ನೀನ್ಯಾರಮ್ಮ..??

ಮುಗಿಲು..