ಯಾರಮ್ಮ ನೀನು?

ಒಲಿವುದು ಹಾವ ಕುಣಿವುದು ಭಾವ
ನಲಿವುದು ನೋವ ಹಾಡುವುದು ಜೀವ
ಕೊಂಡೊಡನೆ ನಿನ್ನನು ಯಾರಮ್ಮ ನೀನು? ....... ಪ

ನೋಡಿದರೆ ನಾಚಿಕೊಂಡು
ಹೂವಿನಂತೆ ನಗುತಿರುವೆ
ಮಾತಾಡಿದರೆ ಮುನಿಸಿಕೊಂಡು
ಬಳ್ಳಿಯಂತೆ ಹಬ್ಬುತ್ತಿರುವೆ
ನನ್ಹೃದಯದ ದಡ್ಡಿಯಲಿ
ಮನದಾಳದ ಮಡ್ಡಿಯಲಿ
ಯಾರಮ್ಮ ನೀನು ನನ್ನಲಿ ನಿಂದೇನು ?.............. ಒಲಿವುದು

ಮನಸಲಿ ಕೂಡಿಕೊಂಡು
ಕನಸನು ಕಾಣುತಿರುವೆ
ಉಸಿರಲಿ ಜಾರಿಕೊಂಡು
ಕವಿತೆಯ ಬರೆಯುತಿರುವೆ
ಕಣ್ಣಿನ ಪುಸ್ತಕದಲಿ
ರೇಖೆಗಳ ಹಾಳೆಯಲಿ
ಯಾರಮ್ಮ ನೀನು ನನ್ನಲಿ ನಿಂದೇನು ?.............. ಒಲಿವುದು





Comments