ಇವಳು ಯಾವಳೋ..

ಇವಳು ಯಾವಳೋ ಇವಳು ಯಾವಳೋ
ಕನಸಲ್ಲಿ ಬಂದು ಮನಸ ಕೆಡಿಸೋಳು
ಕಣ್ಣಲ್ಲಿ ನಿಂತು ದ್ರಷ್ಟ್ಹಿಯ ಮಂಜಾಗಿಸೋಳು ........ಪ

ಅದ್ಯಾವ ಕವಿಕಲ್ಪನೆಯ ಕಾವ್ಯಯಿವಳೋ
ಹೃದಯದಿ ಪ್ರೆಮಕಹಳೆ ಉದಿಹಳೋ
ಮೊಗದಲಿ ಅಮ್ರುತಕಳೆ ನೀಡಿಹಳೋ
ಮನಸ್ಸಿಗೆ ಮನಸನ್ನೇ ಬರೆದಿಹಳೋ
ಇವಳು ಯಾವಳೋ ಇವಳು ಯಾವಳೋ.........ಇವಳು

ಏಳೇಳು ಜನ್ಮದ ನಂಟಿನವಳೋ
ಹೃದಯದ ನೆತ್ತರ ಕುಡಿಯುತಿಹಳೋ
ಬೆಳದಿಂಗಳ ಬಾಲೆಯ ವಂಶದವಳೋ
ಅಮವಾಶ್ಯಾಯ ಕತ್ತಲಲು ಹೊಳೆಯುತಿಹಳೋ
ಇವಳು ಯಾವಳೋ ಇವಳು ಯಾವಳೋ.........ಇವಳು

ಮೋಹದ ಸ್ತಳದಿ ಮನೆ ಮಾಡಿಹಳೋ
ನರನಾಡಿಯ ಮಿಡಿತಕೆ ಜೀವ ತುಂಬಿಹಳೋ
ಉಸಿರೊಳಗೆ ಉಸಿರಾಗಿ ಬಂದಿಹಳೋ
ಎದೆಯೋಳಗವಿತು ನನ್ನನ್ನೇ ಮರೆಸಿಹಳೋ
ಇವಳು ಯಾವಳೋ ಇವಳು ಯಾವಳೋ.........ಇವಳು






Comments