ಖಾಲಿ ಹಾಳೆಯಲಿ...

ಖಾಲಿ ಹಾಳೆಯಲಿ
ಬರೆದ ಅಕ್ಷರಗಳೆಲ್ಲ
ಖಾಲಿ ಖಾಲಿಯಲ್ಲ
ಅದು ಜಾಲಿ ಜಾಲಿ
ಪ್ರೇಮ ಪತ್ರವಾಗಿದ್ದರೆ
ಮನಸೊಳಗೆಲ್ಲ ಹೋಳಿ ಹೋಳಿ ..... ಪ

ಹೃದಯದ ಮುಲೆಮುಲೆಯಲು
ಹುದುಗಿದ ಪ್ರೀತಿಯ ಹುಡುಕಿ
ನೆನಪಿನ ಮೆರವಣಿಗೆಯಲು
ಮರುಗಿದ ನೋವನು ಕೆದಕಿ
ನಿನ್ನರಮನೆಯ ಬಾಗಿಲಿಗೆ
ಕರೆಯೋಲಿಯಲಿ ನಾನಾಗಿ
ಸಾವಿರದ ಸಾವೇ ಇರದ
ವಿಷಯವನು ಹೊತ್ತು ತರಲೆ............ ಖಾಲಿ

ಮುಂಜಾನೆಯ ಮಂಜುಮಂಜಲು
ಇಬ್ಬನಿಯ ತುಣುಕು ಹಿಡಿದು
ಮುಸ್ಸಂಜೆಯ ಮ್ರುದುವಿನಲು
ಅರಳಿದ ಹೂವನು ಹರಿದು
ನಿನ್ನೊಲವಿನ ಪೂಜೆಗೆ
ಪುಜಾರಿಯೇ ನಾನಾಗಿ
ಕೊನೆಯಿರದ ಕೊನೆಯಾಗದ
ಭಾವಭಾಕ್ತಿಯನು ನಿನಗೆ ತರಲೆ












Comments