ಒಂದು ಮುತ್ತಿಗಾಗಿ..
ಹೊಂಚು ಹಾಕಲೇನೆ
ಸಂಚು ಹೂಡಲೇನೆ
ನಿನ್ನ ಒಂದು ಮುತ್ತಿಗಾಗಿ
ತಪವ ಕೂರಲೇನೆ
ಊಟ ಬಿಡಲೇನೆ
ಮಾಟ ಮಾಡಲೇನೆ
ಆ ಒಂದು ಹೊತ್ತಿಗಾಗಿ
ಚಳುವಳಿ ಮಾಡಲೇನೆ..............ಪ
ಮಾತಿನಲೆ ಮೋಡಿ ಮಾಡಿ
ಪ್ರತಿದಿನ ಕಾಡಿ
ಕನಸಿನಲೇ ನನ್ನ ಕೂಡಿ
ಮುತ್ತು ಕೊಡಲೇನೆ
ಹರಿಸಿ ಕೈ ರಕ್ತ ಕೊಡಿ
ಪ್ರೇಮಪತ್ರ ತೀಡಿ
ನನ್ನ ಸುಖವ ನಿಂಗೆ ನೀಡಿ
ಪ್ರೀತಿ ಮಾಡಲೇನೆ .................. ಹೊಂಚು
ನಿನ್ನ ಕಣ್ಣ ತುಂಬಿ
ಹಾರಿ ಮನೆಯ ಕುಂಬಿ
ಕತ್ತಲಲೆ ನನ್ನ ರಂಭೆ
ಮುತ್ತು ನೀಡಲೇನೆ
ನಾನಾಗಿ ಹಾರೋ ದುಂಬಿ
ಬಂದಿರುವೆ ನಿನ್ನ ನಂಬಿ
ಕುಳಿತು ನಿನ್ನ ಹೂಕೊಂಬೆ
ಪ್ರೀತಿ ಮಾಡಲೇನೆ ................... ಹೊಂಚು
ಸಂಚು ಹೂಡಲೇನೆ
ನಿನ್ನ ಒಂದು ಮುತ್ತಿಗಾಗಿ
ತಪವ ಕೂರಲೇನೆ
ಊಟ ಬಿಡಲೇನೆ
ಮಾಟ ಮಾಡಲೇನೆ
ಆ ಒಂದು ಹೊತ್ತಿಗಾಗಿ
ಚಳುವಳಿ ಮಾಡಲೇನೆ..............ಪ
ಮಾತಿನಲೆ ಮೋಡಿ ಮಾಡಿ
ಪ್ರತಿದಿನ ಕಾಡಿ
ಕನಸಿನಲೇ ನನ್ನ ಕೂಡಿ
ಮುತ್ತು ಕೊಡಲೇನೆ
ಹರಿಸಿ ಕೈ ರಕ್ತ ಕೊಡಿ
ಪ್ರೇಮಪತ್ರ ತೀಡಿ
ನನ್ನ ಸುಖವ ನಿಂಗೆ ನೀಡಿ
ಪ್ರೀತಿ ಮಾಡಲೇನೆ .................. ಹೊಂಚು
ನಿನ್ನ ಕಣ್ಣ ತುಂಬಿ
ಹಾರಿ ಮನೆಯ ಕುಂಬಿ
ಕತ್ತಲಲೆ ನನ್ನ ರಂಭೆ
ಮುತ್ತು ನೀಡಲೇನೆ
ನಾನಾಗಿ ಹಾರೋ ದುಂಬಿ
ಬಂದಿರುವೆ ನಿನ್ನ ನಂಬಿ
ಕುಳಿತು ನಿನ್ನ ಹೂಕೊಂಬೆ
ಪ್ರೀತಿ ಮಾಡಲೇನೆ ................... ಹೊಂಚು
Comments