ಬಿಡು ಬಿಡು ಬಿಟ್ಟು ಬಿಡು..

ಬಿಡು ಬಿಡು ಬಿಟ್ಟು ಬಿಡು
ಕೊಡು ಕೊಡು ಕೊಟ್ಟು ಬಿಡು
ನನ ಹೃದಯ ನನಗೆ
ನನ ಒಲವು ನನಗೆ
ನೊಂದಿರುವೆ ಬೆಂದಿರುವೆ
ನಿನ ಪ್ರೇಮದಮಲಿನಲಿ
ಬದುಕುವೆ ಬಾಳುವೆ
ನನದೆ ನವ ಪ್ರೀತಿಯಲಿ ..............ಬಿಡು

ನಗೆಯು ಹದ ಮಾಡೋ ಭೂಮಿಯಲ್ಲ
ತುಳಿದು ತುಳಿದು ಹೋಗಲು
ಒಲವು ಮುದ ನೀಡೋ ಸುರಪಾನವಲ್ಲ
ಕುಡಿಸಿ ಕುಡಿಸಿ ಕೊಲ್ಲಲು
ಅದರೂ ನಗೆಯಲೆ ಒಲವರಳಿಸಿ
ಒಲವಲೆ ಬಿಸಿ ಮೂಡಿಸಿ
ದೂರ ದೂರಾಗುತಿರಲು
ಬಿಡು ಬಿಡು ಬಿಟ್ಟು ಬಿಡು
ಕೊಡು ಕೊಡು ಕೊಟ್ಟು ಬಿಡು................ಬಿಡು

ಮನಸು ಕರಗೋ ಮಂಜುಗಡ್ಡೆಯಲ್ಲ
ವಿರಹ ಶಾಖ ಕೊಡಲು
ನೆನಪು ಸೊರಗೋ ದೇಹವಲ್ಲ
ಅನ್ನ ನೀರು ಬಿಡಲು
ಕಣ್ಣು ಕಣ್ಣಲೆ ಮಾತಾಡಿಸಿ
ಕಣ್ಣಲೆ ಕಸ ತುಂಬಿಸಿ
ಖುಸಿ ಖುಸಿ ಪಡುತಿರಲು
ಬಿಡು ಬಿಡು ಬಿಟ್ಟು ಬಿಡು
ಕೊಡು ಕೊಡು ಕೊಟ್ಟು ಬಿಡು...........ಬಿಡು

Comments