ನೀನೇಕೆ ಕೊಲ್ಲುವೆ ಚೆಲುವೆ ?..

ಕನಸಲು ಮನಸಲೂ ಕೊಲ್ಲುವೆ
ಮಾತಿನಲು ನೋಟದಲು ಕೊಲ್ಲುವೆ
ನಗೆಯಲು ಅಳುವಲು ಕೊಲ್ಲುವೆ
ಕುಂತರು ನಿಂತರು ಕೊಲ್ಲುವೆ
ಇಲ್ಲಿಯೂ ಅಲ್ಲಿಯೂ ಎಲ್ಲೆಲ್ಲಿಯೂ
ಬಿಡದೆ ಬೆನ್ನಟ್ಟಿ ಕೊಲ್ಲುವೆ
ಯಾತಕೆ ಓ ಚೆಲುವೆ ನೀನೇಕೆ ಕೊಲ್ಲುವೆ ?..
ಪ್ರೇಮದ ಅಸ್ತ್ರದಿಂದ ನೀನೇಕೆ ಕೊಲ್ಲುವೆ ಚೆಲುವೆ ?........ ಪ

ಹೊತ್ತು ಉರುಳಿದರು
ಹೊತ್ತು ಹೊರಳಿದರು
ನಿನ ಧ್ಯಾನದಲೇ ಕುಳಿತಿರುವೆ
ನೋವು ಕೆದರಿದರು
ನೋವು ಚದುರಿದರು
ನಿನ ನೆನಪಲೆ ಕಾದಿರುವೆ
ಆದರು ನಿನಗೆ ಕರುಣೆ ಬಾರದೆ
ಪ್ರೀತಿಯ ತಿಳಿಯಬಾರದೆ
ತಿಳಿದರು ತಿಳಿದಿರದ ಹಾಗೆ ನಿಂತು
ದುರಿಂದಲೇ ನನ್ನೇಕೆ ಕೊಲ್ಲುವೆ ಚೆಲುವೆ....? .......... ಕನಸಲು

ದೂರ ಹೋದರು
ಸನಿಹ ಬಂದರು
ನಿನ ಕಣ್ಣೋಟದಲೇ ತಿರಸ್ಕರಿಸುವೆ
ಜೀವನ ಸಾಕಾದರೂ
ಸಾವು ಬೇಕಾದರೂ
ನಿನ ಮನಬಂದಂತೆ ಆಡಿಸುವೆ
ಆದರು ನಾ ನಿನ್ನ ಆರಾಧಿಸುತಿಲ್ಲವೇ
ನೀನೆe ನನ್ ಪಾಲಿಗಲ್ಲವೇ
ಸಾಲಾದರೂ ಸೋಲಾದರು ನಿನ ಸಾಕುವೆ
ಓ ಚೆಲುವೆ ನೀ ಕೊಲ್ಲಬೇಡ ವೇ .................... ಕನಸಲು

Comments