ಓ ಮಳೆಬಿಲ್ಲೆ..

ಕುಂಟಾಬಿಲ್ಲೆ ಆಡೋಣ ಬಾರೆ
ಓ ಮಳೆಬಿಲ್ಲೆ
ಆಟ ಆಡಿದ್ಮೇಲೆ ಊಟ ಮಾಡಿಸಿ
ಕಳಿಸುವೆ ನಿನ್ನನಲ್ಲೆ
ಬಾರೆ ರಾಮನ ಬಿಲ್ಲೆ ಪ್ರೇಮದ ಜೆಲ್ಲೆ
ಓ ಮಳೆಬಿಲ್ಲೆ ಮುದ್ದು ಮಳೆಬಿಲ್ಲೆ .............. ಪ

ಏಳು ರಂಗನು ಹೊಮ್ಮುತ
ಏಳು ಹೆಜ್ಜೆಯಲೇ ನೀ ಬಾ
ಪ್ರೇಮದ ಹನಿಯ ಚಿಮ್ಮುತ
ರಂಗು ರಂಗನೆ ನೀ ತಾ
ನನ್ನವಳ ಹಣೆಗೆ ಹಚ್ಚುವೆ
ಜೊತೆ ಬಣ್ಣ ಆಡುವೆ
ತಾರೆ ತಾರೆ ಓ ಮಳೆಬಿಲ್ಲೆ ನೀ ತಾರೆ ...............ಕುಂಟಾಬಿಲ್ಲೆ

ಕವಿತೆ ಬರೆಯೋ ಕವಿಗಳಿಗೆಲ್ಲ
ಬೇಟಿ ಮಾಡಿಸುವೆ ಬಾರೆ
ಪ್ರೀತಿ ಮಾಡೋ ಹುಡುಗರಿಗೆಲ್ಲ
ಚುಕ್ಕಿ ಚಂದ್ರನ ತಾರೆ
ನನ್ನ ಊರ ಸುತ್ತಲೆಲ್ಲ
ನಿನ್ನ ಬಿಂಬ ಊರೇ
ಬಾರೆ ಬಾರೆ ಓ ಮಳೆಬಿಲ್ಲೆ ನೀ ಬಾರೆ ............ ಕುಂಟಾಬಿಲ್ಲೆ

Comments