ಕೆಮ್ಮನಗುಂಡಿ ಟ್ರಿಪ್ ಲಿ ಬರೆದ ಗೀತೆ

ಮಸ್ತಕದ ತವಕ ಹೃದಯದಲ್ಲ್ಯಾಕೋ
ಮನದ ಪುಳಕ ಕಂಗಳಲ್ಲ್ಯಾಕೋ
ತಿಳಿಯದ ತಾಳದ
ತೋಚದ ಗೀಚದ
ಅವಳ ಆ ಹಸಿನೆನಪು
ಉಸಿರಲ್ಲ್ಯಾಕೋ ಬಿಸಿ ಉಸಿರಲ್ಲ್ಯಾಕೋ............. pa

ಮುಗಿಲಿನ ತುದಿಯು
ನೆತ್ತಿಯ ತಾಕುತಿದೆ
ಮಂಜಿನ ಮುದವು
ಮೈ ಸೋಕುತಿದೆ
ಮಳೆಯ ಹನಿಯು
ಕೈ ಹಾಕುತಿದೆ
ಒಲವಿನ ಒಳವೊಳಗೆ
ಚಲುವಿನ ಚಳಿಯೊಳಗೆ
ಹೇಳೇ ಗೆಳತಿ
ಇದೇನಾ ಸ್ವರ್ಗ ಇದೇನಾ ಸ್ವರ್ಗ......... ಮಸ್ತಕದ

ಸೌಂದರ್ಯದ ಸಾರವು
ತುಂಬಿ ಸೋರುತಿದೆ
ಮೋಹಕ ಮುಖವು
ಮೌನದಿ ನಗುತಿದೆ
ಸುಸ್ವಾಗತದ ಹಾರವು
ದಾರಿಯ ಕೊಡುತಿದೆ
ಹೇಳೇ ಸಂಗಾತಿ
ಇದೇನಾ ಸ್ವರ್ಗ ಇದೇನಾ ಸ್ವರ್ಗ.........
ಸ್ತಕದ

Comments