ಗೆಳತಿ ನಿನಗೊಂದನೆ..

ಮೊದಲ ಗೆಳತಿಯಾಗಿ
ಮನದಲಿ ಮೊಹಬ್ಬತ್ ತಂದೆ
ಜೀವಕೆ ಜೊತೆಯಾಗಿ
ಕಣ್ಣಲಿ ಖುಬಸುರತ್ ತಂದೆ
ಗುರಿಗೆ ಸ್ಪೂರ್ತಿಯಾಗಿ
ಹೃದಯದಲಿ ಹಖಿಖತ್ ತಂದೆ
ಡಿಯರ ಲವ್ ಯು ಮಿಸ್ ಯು ....... ಪ

ಅಮವಾಷ್ಯ ಕತ್ತಲ ಕವಿದು
ಜೀವವ ಗೀಚಿದೆ
ಹುಣ್ಣಿಮೆ ಬೆಳಕ ಹರಿದು
ಪ್ರೇಮವ ದೋಚಿದೆ
ಗೀಚಿ ದೋಚಿದ ಗೆಳತಿ ನಿನಗೊಂದನೆ
ಏಳೇಳು ಜನ್ಮದ ಕೋಟಿ ಅಭಿನಂದನೆ............ ಮೊದಲ

ಮುಗಿಲಿನಂತೆ ವಿಶಾಲತೆ ತಳೆದು
ಇಡಿ ಜಗವ ಸುತ್ತಿದೆ
ಧರೆಯಂತೆ ದಿಲ್ಲನ್ನಾ ತೆರೆದು
ಇಡಿ ದೇಹವ ಮುತ್ತಿದೆ
ಸುತ್ತಿ ಮುತ್ತಿದ ಗೆಳತಿ ನಿನಗೊಂದನೆ
ನೂರಾರು ಯುಗದ ಕೋಟಿ ಅಭಿನಂದನೆ........... ಮೊದಲ


Comments