ಭಯ ಭಯ...
ಭಯ ಭಯವೇಕೋ ನನ್ನೊಳಗೆ
ಭಯ ಭಯವೇಕೋ ಕಣ್ಣೊಳಗೆ
ನೀನೆದುರು ಬಂದರೆ ನೀನೆದರು ಹಾಯಿಸಿದರೆ.......... ಪ
ಕೋಟಿ ಮಾತುಗಳಿಗೆ ಕೀಲಿಯ ಹಾಕಿ
ಬಾಯಿಯ ಸಂದಕ ಮುಚ್ಚಿರುವೆ
ನೂರು ಕವನಗಳಿಗೆ ಮಸಿಯ ಚೆಲ್ಲಿ
ಕೈ ಬರವಣಿಗೆ ಬಿಡಿಸಿರುವೆ
ಅದರೂ ನೀನೆದುರಾದಾಗ
ಬಾಯಿ ತೆರೆಯದೆ ಮಾತು ಹೊರಡದೆ
ಕವನವೇಕೆ ಹೊರಬರುವದೋ
ಭಯ ಭಯವೋ ಭಾವನೆಗೂ
ಭಯ ಭಯವೋ ಪ್ರೀತಿಗೂ..................... ಭಯ
ಪ್ರೇಮದ ಉತ್ತುಂಗ ಏರಿ ನಿಂತು
ಜಿಗಿಯೋ ಆಶೆಯನು ಇಟ್ಟಿರುವೆ
ಗಗನದ ಬಾಗಿಲಿಗೆ ತೋರಣ ಬಿಗಿದು
ಒಳ ಹೋಗದೆ ಹಾಗೆ ಬಂದಿರುವೆ
ಬರೋವಾಗ ನೀನೆದುರಾದಾಗ
ಬಾಗಿಲು ತೆರೆಯದೆ ಉತ್ತುಂಗದಿ ಜಿಗಿಯದೆ
ಸಿಹಿ ಸಾವು ಹೇಗೆ ಬರುವದೋ
ಭಯ ಭಯ ಸಾವಿಗೂ
ಭಯ ಭಯ ನೋವಿಗೂ........................... ಭಯ
ಭಯ ಭಯವೇಕೋ ಕಣ್ಣೊಳಗೆ
ನೀನೆದುರು ಬಂದರೆ ನೀನೆದರು ಹಾಯಿಸಿದರೆ.......... ಪ
ಕೋಟಿ ಮಾತುಗಳಿಗೆ ಕೀಲಿಯ ಹಾಕಿ
ಬಾಯಿಯ ಸಂದಕ ಮುಚ್ಚಿರುವೆ
ನೂರು ಕವನಗಳಿಗೆ ಮಸಿಯ ಚೆಲ್ಲಿ
ಕೈ ಬರವಣಿಗೆ ಬಿಡಿಸಿರುವೆ
ಅದರೂ ನೀನೆದುರಾದಾಗ
ಬಾಯಿ ತೆರೆಯದೆ ಮಾತು ಹೊರಡದೆ
ಕವನವೇಕೆ ಹೊರಬರುವದೋ
ಭಯ ಭಯವೋ ಭಾವನೆಗೂ
ಭಯ ಭಯವೋ ಪ್ರೀತಿಗೂ..................... ಭಯ
ಪ್ರೇಮದ ಉತ್ತುಂಗ ಏರಿ ನಿಂತು
ಜಿಗಿಯೋ ಆಶೆಯನು ಇಟ್ಟಿರುವೆ
ಗಗನದ ಬಾಗಿಲಿಗೆ ತೋರಣ ಬಿಗಿದು
ಒಳ ಹೋಗದೆ ಹಾಗೆ ಬಂದಿರುವೆ
ಬರೋವಾಗ ನೀನೆದುರಾದಾಗ
ಬಾಗಿಲು ತೆರೆಯದೆ ಉತ್ತುಂಗದಿ ಜಿಗಿಯದೆ
ಸಿಹಿ ಸಾವು ಹೇಗೆ ಬರುವದೋ
ಭಯ ಭಯ ಸಾವಿಗೂ
ಭಯ ಭಯ ನೋವಿಗೂ........................... ಭಯ
Comments